March 21, 2025

ದನದ ಕೊಟ್ಟಿಗೆಯಲ್ಲಿ ಖೋಟಾ ನೋಟು ಪ್ರಿಂಟ್‌: ತಂದೆ, ಮಗನ ಬಂಧನ

0

ಮೈಸೂರು: ಜಿಲ್ಲೆಯ ಮಾದಾಪುರ ಬಳಿ ದನದ ಕೊಟ್ಟಿಗೆಯಲ್ಲಿ ಖೋಟಾ ನೋಟು ಪ್ರಿಂಟ್‌ ಮಾಡುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ಟಿ. ನರಸೀಪುರ ಪೊಲೀಸರು ದಾಳಿ ಮಾಡಿ ಕೃತ್ಯದಲ್ಲಿ ತೊಡಗಿದ್ದ ತಂದೆ ಮತ್ತು ಮಗನನ್ನು ಬಂಧಿಸಿರುವ ಘಟನೆ ಟಿ. ನರಸೀಪುರ ತಾಲ್ಲೂಕಿನ ಹಿರಿಯೂರು ಗ್ರಾಮದಲ್ಲಿ ನಡೆದಿದೆ. ಕೊಟ್ಟಿಗೆಯಲ್ಲಿದ್ದ ನೋಟು ಪ್ರಿಂಟ್‌ ಮಾಡಲು ಬಳಸುತ್ತಿದ್ದ ಸಾಮಗ್ರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಹಿರಿಯೂರು ಗ್ರಾಮದ ನಾಗೇಶ್ (25) ಹಾಗೂ ಶಿವಪ್ರಸಾದ್ (48) ಬಂಧಿತ ಆರೋಪಿಗಳು. ಖಚಿತ ಮಾಹಿತಿಯ ಮೇರೆಗೆ ಟಿ. ನರಸೀಪುರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ನೇತೃತ್ವದ ತಂಡ ದಾಳಿ ನಡೆಸಿದಾಗ ಅರೋಪಿಗಳು ತಾವು ಮಲಗಲು ಹಾಸಿಕೊಂಡಿದ್ದ ಹಾಸಿಗೆ ಪಕ್ಕದಲ್ಲಿ ರಟ್ಟಿನ ಬಾಕ್ಸ್ನಲ್ಲಿ ಎಪ್ಸನ್ ಕಲರ್ ಪ್ರಿಂಟರ್ ಕಂಡುಬಂದಿದೆ‌‌. ಪೊಲೀಸರು ಇನ್ನಷ್ಟು ಪರಿಶೀಲನೆ ನಡೆಸಿದಾಗ ಈ ಕೃತ್ಯಕ್ಕೆ ಬಳಸುತ್ತಿದ್ದ‌‌ ಎಲ್ಲ ವಸ್ತುಗಳನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದ್ದಾರೆ.

ಖೋಟಾ ನೋಟು ಪ್ರಿಂಟಿಂಗ್‌ಗೆ ಪಕ್ಕಾ ಪ್ಲಾನ್ ಮಾಡಿದ್ದ ಖದೀಮರು : ಪೊಲೀಸರು, ನೋಟು ಪ್ರಿಂಟ್ ಮಾಡಲು ಬಳಸುತ್ತಿದ್ದ ಒಂದು ಕಪ್ಪು ಬಣ್ಣದ ಎಪ್ಸನ್ ಪ್ರಿಂಟರ್, ಕಪ್ಪು ಬಣ್ಣದ ಪೇಪರ್ ಮೇಜರ್ಮೆಂಟ್ ಕಟಿಂಗ್ ಸ್ಕೇಲ್, ಒಂದು ಎ4 ಅಳತೆಯ ಗಾಂಧೀಜಿ ಭಾವಚಿತ್ರದ, ವಾಟರ್ ಮಾಕ್೯ ಮತ್ತು ನೋಟಿನ ಗೆರೆಯುಳ್ಳ ಬಿಳಿ ಬಣ್ಣದ ಹಾಳೆ, 4 ಕಲರ್ ಇಂಕ್ ಬಾಟಲ್ಗಳು, ಎ4 ಸೈಜ್ ಅಳತೆಯ ಬಿಳಿ‌ ಹಾಳೆಗಳು ಸೇರಿದಂತೆ ಎಲ್ಲಾ ರೀತಿಯ ವಸ್ತುಗಳನ್ನು‌ ಬಳಸಿಕೊಂಡು ನೋಟು ಪ್ರಿಂಟಿಂಗ್ಗೆ ಆರೋಪಿಗಳು ಪಕ್ಕ ಪ್ಲಾನ್ ಮಾಡಿ‌ದ್ದರು. 25,500 ರೂ. ಮೌಲ್ಯದ 51 ಖೋಟಾ ನೋಟುಗಳನ್ನು ಕೂಡ ಪ್ರಿಂಟ್ ಮಾಡಿದ್ದರು.

 

 

Leave a Reply

Your email address will not be published. Required fields are marked *

error: Content is protected !!