ಮರಕ್ಕೆ ಢಿಕ್ಕಿಯಾದ ಕಾರು: ಮೂವರು ಸ್ಥಳದಲ್ಲಿಯೇ ಸಾವು

ವಿಜಯಪುರ: ಮರಕ್ಕೆ ಕಾರು ಡಿಕ್ಕಿಯಾದ ಪರಿಣಾಮ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಕನ್ನಾಳ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ.
ಮೃತರನ್ನು ಅಭಿಷೇಕ್ ಸಾವಂತ್ (23), ವಿಜಯಕುಮಾರ್ ಔರಂಗಾಬಾದ್ (24) ರಾಜು ಬಿರಾದಾರ (23) ಎಂದು ಗುರುತಿಸಲಾಗಿದೆ.
ಕಾರಿನಲ್ಲಿ ಐವರು ಸೊಲ್ಲಾಪುರಕ್ಕೆ ಹೋಗಿದ್ದರು.
ತಡರಾತ್ರಿ ವಾಪಸ್ ಬರುವಾಗ ಈ ಅವಘಡ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.