ವೈದ್ಯ ದಂಪತಿ, ಟೀಚರ್ ಸೇರಿ ಮೂವರು ಸಾವು

ಕೇರಳ: ವೈದ್ಯ ದಂಪತಿ ಹಾಗೂ ಟೀಚರ್ ಒಬ್ಬರು ಬ್ಲ್ಯಾಕ್ ಮ್ಯಾಜಿಕ್‌ಗೆ ಬಲಿಯಾಗಿರುವ ಆಘಾತಕಾರಿ ಘಟನೆಯೊಂದು ಕೇರಳದಲ್ಲಿ ನಡೆದಿದೆ.
ಕೇರಳದ ಕೊಟ್ಟಾಯಂ ಜಿಲ್ಲೆಯ ವೈದ್ಯ ದಂಪತಿ ನವೀನ್ ಥಾಮಸ್ (35) ,ಪತ್ನಿ ದೇವಿ (35) ಹಾಗೂ ತಿರುವನಂತಪುರದ ನಿವಾಸಿಯಾಗಿ ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ಆರ್ಯಾ ಬಿ.ನಾಯರ್ ( 29) ಈ ಮೂವರು ಬ್ಲ್ಯಾಕ್ ಮ್ಯಾಜಿಕ್‌ಗೆ ಬಲಿಯಾಗಿದ್ದಾರೆ ಎನ್ನಲಾಗಿದೆ.
ರೂಮ್‌ನ ಬೆಡ್ ಮೇಲೆ ಆರ್ಯಾ ಹಾಗೂ ದೇವಿಯ ಮೃತದೇಹ ಕಂಡು ಬಂದಿದ್ದು, ನವೀನ್ ದೇಹ ಪತ್ತೆಯಾಗಿರಲಿಲ್ಲ.
ಹೀಗಾಗಿ ಹೊಟೇಲ್ ಸಿಬ್ಬಂದಿ ನವೀನ್ ಕೊಲೆ ಮಾಡಿ ಪರಾರಿ ಆಗಿರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದರು. ಆದರೆ ಪೊಲೀಸರು ಬಂದು ಪರಿಶೀಲನೆ ನಡೆಸಿದಾಗ ನವೀನ್ ಥಾಮಸ್ ಮೃತ ದೇಹ ಬಾತ್‌ರೂಮ್‌ನಲ್ಲಿ ಪತ್ತೆಯಾಗಿದೆ.
ಮೂವರೂ ಕೈ ಕತ್ತರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ರಕ್ತ ಹೆಪ್ಪುಗಟ್ಟದೇ ಇರಲು ಮಾತ್ರೆಗಳನ್ನು ಸೇವಿಸಿದ್ದಕ್ಕೆ ಸಾಕ್ಷಿಯಾಗಿ ಕೆಲವೊಂದು ಮಾತ್ರೆಗಳು ಅಲ್ಲಿ ಪತ್ತೆಯಾಗಿದೆ.
ದೇವಿ ಮತ್ತು ಆರ್ಯಾ ಅವರ ಎಡಗೈನಲ್ಲಿ ನರ ಕತ್ತರಿಸಿದ ಗಾಯಗಳಿದ್ದರೆ, ನವೀನ್ ಥಾಮಸ್ ಅವರ ಬಲಗೈನಲ್ಲಿ ಈ ಗಾ*ಯ ಕಂಡು ಬಂದಿದೆ.