ಮುಂಬೈನಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟ: 5 ಮನೆಗಳು ಕುಸಿತ
ಮುಂಬೈ : ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ 5 ಮನೆಗಳು ಕುಸಿತಗೊಂಡಿರುವ ಘಟನೆ ಮುಂಬೈನ ಚೆಂಬೂರ್ ಪ್ರದೇಶದ ಗಾಲ್ಫ್ ಕ್ಲಬ್ ಬಳಿಯ ಓಲ್ಡ್ ಬ್ಯಾರಕ್ ನಲ್ಲಿ ಇಂದು ಮುಂಜಾನೆ 7.30 ಕ್ಕೆ ಸಂಭವಿಸಿದೆ.
ಮನೆಯೊಂದರಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಕಟ್ಟಡಗಳು ಕುಸಿದು ಬಿದ್ದಿವೆ. ಘಟನೆಯಲ್ಲಿ 6 ಮಂದಿಗೆ ಸುಟ್ಟಗಾಯಗಳಾಗಿದ್ದು, ಅವರೆಲ್ಲರೂ ಸ್ಥಳೀಯ ಗೋವಂಡಿಯ ಸಿವಿಕ್-ರನ್ ಶತಾಬ್ದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಂಡ 6 ಮಂದಿ ಪೈಕಿ 47 ವರ್ಷದ ಮಹಿಳೆಯೂ ಸೇರಿದ್ದಾರೆ. ಇನ್ನು ಗಾಯಾಳುಗಳೆಲ್ಲರೂ ಶತಾಬ್ದಿ ಆಸ್ಪತ್ರೆಯ ಒಪಿಡಿ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರೆಲ್ಲರ ಆರೋಗ್ಯ ಸ್ಥಿರವಾಗಿದೆ” ಎಂದು ಅಗ್ನಿಶಾಮಕ ದಳದ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಇನ್ನು ಐದು ಅಗ್ನಿಶಾಮಕ ದಳದ ವಾಹನಗಳು ಪ್ರಸ್ತುತ ಸ್ಥಳದಲ್ಲಿದ್ದು, ಕುಸಿದ ಮನೆಗಳ ಅವಶೇಷಗಳ ಅಡಿಯಲ್ಲಿ ಯಾರೂ ಸಿಲುಕಿಕೊಂಡಿಲ್ಲ ಎಂದು ಖಚಿತಪಡಿಸಿಕೊಳ್ಳಲು ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಗ್ನಿಶಾಮಕ ದಳ, ಪೊಲೀಸ್, ನಾಗರಿಕ ಸಿಬ್ಬಂದಿ, ಆಂಬುಲೆನ್ಸ್ ಸೇವೆ ಹಾಗೂ ಇತರೆ ಸಂಸ್ಥೆಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು” ಎಂದು ಅಗ್ನಿಶಾಮಕ ದಳದ ಅಧಿಕಾರಿ ತಿಳಿಸಿದ್ದಾರೆ.