ವಿಟ್ಲ: ಡಿ.4ರಂದು ಕಂಬಳಬೆಟ್ಟುವಿನಲ್ಲಿ ಗ್ರಾಮ ಒನ್ ಸೇವಾ ಕೇಂದ್ರ ಉದ್ಘಾಟನೆ
ವಿಟ್ಲ: ಕರ್ನಾಟಕ ಸರ್ಕಾರದ ಸಮಗ್ರ ನಾಗರೀಕ ಸೇವೆಗಳು ಒಂದೇ ಸೂರಿನಡಿಯಲ್ಲಿ ಜನರಿಗೆ ಸಿಗಲು ಪ್ರತೀ ಪಂಚಾಯತ್ ವ್ಯಾಪ್ತಿಯಲ್ಲಿ ಆರಂಬಿಸಲಾದ ಗ್ರಾಮ ಒನ್ ನಾಗರೀಕ ಸೇವಾ ಕೇಂದ್ರ ವಿಟ್ಲ ಮುಡ್ನೂರು ಗ್ರಾ.ಪಂ ವ್ಯಾಪ್ತಿಯ ಗ್ರಾಮ ಒನ್ ಕೇಂದ್ರವು ಕಂಬಳಬೆಟ್ಟು ವಿಲೇಜ್ ಸೂಪರ್ ಮಾರ್ಕೆಟ್ ಕಟ್ಟಡದಲ್ಲಿ ದಿನಾಂಕ 4/12/23 ಸೋಮವಾರದಂದು ಬೆಳಿಗ್ಗೆ 9.30 ಉದ್ಘಾಟನೆಗೊಳ್ಳಲಿದೆ.
ಗಣ್ಯ ಅತಿಥಿಗಳ ಉಪಸ್ಥಿತಿಯಲ್ಲಿ ಶುಭಾರಂಭಗೊಳ್ಳಲಿದ್ದು, ಸಮಗ್ರ ನಾಗರೀಕ ಸೇವೆಗೆ ಊರಿನ ನಾಗರಿಕರು ಸಂಪರ್ಕಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ಮಾಲಕರು ತಿಳಿಸಿದ್ದಾರೆ. ಇಲ್ಲಿ ರಾಜ್ಯ ಸರಕಾರದ ಎಲ್ಲಾ ಸೇವೆಗಳು ಜನರಿಗೆ ಲಭ್ಯವಾಗಲಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು. 8904128730