ಖಾಲಿಸ್ತಾನಿ ಉಗ್ರ ಪನ್ನುನ್ ಹತ್ಯೆಗೆ ಸಂಚು ಆರೋಪ:
ಭಾರತೀಯ ಪ್ರಜೆಯ ವಿರುದ್ಧ ಅಮೆರಿಕದಲ್ಲಿ ಪ್ರಕರಣ ದಾಖಲು
ವಾಷಿಂಗ್ಟನ್: ಸಿಖ್ಸ್ ಫಾರ್ ಜಸ್ಟೀಸ್ ಸಂಸ್ಥಾಪಕ ಗುರುಪತ್ವಂತ್ ಸಿಂಗ್ ಪನ್ನುನ್ ಅವರ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದಲ್ಲಿ ಭಾರತೀಯ ಪ್ರಜೆಯೊಬ್ಬರ ವಿರುದ್ಧ ಅಮೆರಿಕ ಪ್ರಕರಣ ದಾಖಲಿಸಿದೆ.
ಮಾದಕದ್ರವ್ಯ ಕಳ್ಳಸಾಗಣೆದಾರನೆನ್ನಲಾದ ನಿಖಿಲ್ ಗುಪ್ತಾನನನು ಕಳೆದ ಜೂನ್ನಲ್ಲಿ ಜೆಕ್ ಗಣರಾಜ್ಯದ ಅಧಿಕಾರಿಗಳು ಬಂಧಿಸಿದ್ದು, ಆತ ಗಡಿಪಾರುಗೊಳ್ಳುವ ನಿರೀಕ್ಷೆಯಲ್ಲಿದ್ದಾನೆ.
ನಿಖಿಲ್ ಗುಪ್ತಾ ಅವರನ್ನ ಜೂನ್ನಲ್ಲಿ ಜೆಕ್ ಅಧಿಕಾರಿಗಳು ಬಂಧಿಸಿದ್ದು, ಹಸ್ತಾಂತರಕ್ಕಾಗಿ ಕಾಯುತ್ತಿದ್ದಾರೆ ಎಂದು ಯುಎಸ್ ಅಟಾರ್ನಿ ಕಚೇರಿ ಬುಧವಾರ ತಿಳಿಸಿದೆ. ಅದರಂತೆ ವರ್ಷದ ಜೂನ್ನಲ್ಲಿ ಜೆಕ್ ಅಧಿಕಾರಿಗಳು ಬಂಧಿಸಿದ್ದ ಭಾರತೀಯ ಪ್ರಜೆ ನಿಖಿಲ್ ಗುಪ್ತಾ ವಿರುದ್ಧ ಬುಧವಾರ ಆರೋಪ ಹೊರಿಸಲಾಗಿದೆ ಎಂದು ಮ್ಯಾನ್ಹ್ಯಾಟನ್ನಲ್ಲಿರುವ ಯುಎಸ್ ಅಟಾರ್ನಿ ಕಚೇರಿ ತಿಳಿಸಿದೆ.
ಇನ್ನು ಈ ಕುರಿತು ಮ್ಯಾನ್ಹ್ಯಾಟನ್ನ ಉನ್ನತ ಫೆಡರಲ್ ಪ್ರಾಸಿಕ್ಯೂಟರ್ ಡಾಮಿಯನ್ ವಿಲಿಯಮ್ಸ್ ತಮ್ಮ ಹೇಳಿಕೆಯಲ್ಲಿ “ಸಿಖ್ಖರಿಗೆ ಸಾರ್ವಭೌಮ ರಾಷ್ಟ್ರವನ್ನು ಸ್ಥಾಪಿಸಲು ಸಾರ್ವಜನಿಕವಾಗಿ ಪ್ರತಿಪಾದಿಸಿದ ಭಾರತೀಯ ಮೂಲದ ಯುಎಸ್ ಪ್ರಜೆಯನ್ನ ನ್ಯೂಯಾರ್ಕ್ ನಗರದಲ್ಲಿಯೇ ಹತ್ಯೆ ಮಾಡಲು ಪ್ರತಿವಾದಿ ಭಾರತದಿಂದ ಪಿತೂರಿ ನಡೆಸಿದ್ದಾನೆ” ಎಂದು ಹೇಳಿದ್ದಾರೆ.