December 22, 2024

ವಿಟ್ಲ: ಹೊರೈಝನ್ ಶಾಲೆಯ ವಿದ್ಯಾರ್ಥಿಗಳಿಂದ ಪೊಲೀಸ್ ಠಾಣೆ ಭೇಟಿ:

0

ವಿಟ್ಲ : ಪಠ್ಯೇತರ ಚಟುವಟಿಕೆಯ ಭಾಗವಾಗಿ ವಿಟ್ಲ ಹೊರೈಝನ್ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿಗಳು ವಿಟ್ಲ ಪೊಲೀಸ್ ಠಾಣೆಗೆ ಭೇಟಿ ನೀಡಿದರು. ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಆರಕ್ಷಕ ಅಧಿಕಾರಿಗಳ ಪಾತ್ರ ಹಾಗೂ ಠಾಣೆಯ ಕಾರ್ಯ ವೈಖರಿಯ ಬಗ್ಗೆ ಮಾಹಿತಿ ಪಡೆದುಕೊಂಡರು.

ವಿದ್ಯಾರ್ಥಿಗಳು ಶಾಲೆಯಲ್ಲಿ ಅಧ್ಯಯನ ಮಾಡಿದ ವಿಷಯಗಳನ್ನು ನೇರವಾಗಿ ಕಂಡಾಗ ಕಲಿಕೆ ಇನ್ನಷ್ಟು ಪುಷ್ಟೀಕರಣಗೊಳ್ಳುತ್ತದೆ. ಇದು ಅನುಭವ ಕಲಿಕೆಗೆ ದಾರಿ ಮಾಡಿಕೊಡುತ್ತದೆ.
ಪೊಲೀಸ್ ಠಾಣೆಯ ಭೌತಿಕ ರಚನೆ ಮತ್ತು ಪೊಲೀಸ್ ಅಧಿಕಾರಿಗಳು ನಿರ್ವಹಿಸುವ ಕರ್ತವ್ಯಗಳ ಸ್ವರೂಪವನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳುವುದು, ರಾಜ್ಯದ ಪೊಲೀಸ್ ವ್ಯವಸ್ಥೆಯಲ್ಲಿ ವಿಶ್ವಾಸ ಮೂಡಿಸುವುದು ಈ ಪ್ರವಾಸದ ಉದ್ದೇಶವಾಗಿದೆ. ವಿದ್ಯಾರ್ಥಿಗಳು ವೈರ್‌ಲೆಸ್ ಕೊಠಡಿ, ಪೊಲೀಸ್ ಲಾಕಪ್ ಮತ್ತು ಶಸ್ತ್ರಾಸ್ತ್ರ ಸೇರಿದಂತೆ ಪೊಲೀಸ್ ಠಾಣೆಯ ವಿವಿಧ ವಿಭಾಗಗಳನ್ನು ಕುತೂಹಲದಿಂದ ವೀಕ್ಷಿಸಿದರು.

ಎಎಸ್ಐ ತಿಮ್ಮೇ ಗೌಡ ವಿದ್ಯಾರ್ಥಿಗಳಿಗೆ ಸುರಕ್ಷತೆಯ ಬಗ್ಗೆ ಕಿರು ಮಾಹಿತಿ ನೀಡಿದರು. ಠಾಣಾಧಿಕಾರಿಗಳು ಸಲ್ಲಿಸುತ್ತಿರುವ ನಿಸ್ವಾರ್ಥ ಸೇವೆಗಾಗಿ ವಿದ್ಯಾರ್ಥಿಗಳು ಗುಲಾಬಿ ಹೂ ನೀಡುವುದರ ಮೂಲಕ‌ ಕೃತಜ್ಞತೆ ಸಲ್ಲಿಸಿದರು.

 

 

ಶಾಲಾ ಮುಖ್ಯ ಶಿಕ್ಷಕ ಮನಾಝಿರ್ ಮುಡಿಪು , ಉಪಾಧ್ಯಕ್ಷ ವಿಕೆಎಂ ಅಶ್ರಫ್, ಶಾಲಾ ಶಿಕ್ಷಕಿಯರು, ವಿಟ್ಲ ಠಾಣಾ ಸಿಬ್ಬಂದಿಗಳಾದ ಅಶೋಕ್, ಅರ್ಪಿತಾ, ಸವಿತಾ, ಹೇಮರಾಜ್, ಪೂಜಾ, ಚಿತ್ರಲೇಖ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!