February 3, 2026

WWE ಸ್ಟಾರ್ ಬ್ರೇ ವ್ಯಾಟ್ ಹೃದಯಾಘಾತದಿಂದ ಸಾವು

0
image_editor_output_image1790382601-1692942364144.jpg

ನ್ಯೂಯಾರ್ಕ್: ವರ್ಲ್ಡ್ ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್ ಸ್ಟಾರ್ ಬ್ರೇ ವ್ಯಾಟ್ ಗುರುವಾರ ನಿಧನರಾದರು ಎಂದು ಕಂಪನಿಯ ಸಿಸಿಒ ಪಾಲ್ “ಟ್ರಿಪಲ್ ಎಚ್” ಲೆವೆಸ್ಕ್ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದರು.

36 ವರ್ಷದ ಬ್ರೇ ವ್ಯಾಟ್ ಅವರು ಹೃದಯಾಘಾತದಿಂದ ನಿಧನರಾದರು ಎಂದು ವರದಿಯಾಗಿದೆ.

“ಡಬ್ಲ್ಯೂ ಡಬ್ಲ್ಯೂಇ ಹಾಲ್ ಆಫ್ ಫೇಮರ್ ಮೈಕ್ ರೊಟುಂಡಾ ಅವರಿಂದ ಇದೀಗ ಕರೆ ಬಂದಿದೆ, ಅವರು ನಮ್ಮ ಡಬ್ಲ್ಯೂ ಡಬ್ಲ್ಯೂಇ ಕುಟುಂಬದಲ್ಲಿ ಬ್ರೇ ವ್ಯಾಟ್ ಎಂದು ಕರೆಯಲ್ಪಡುವ ವಿಂಡಮ್ ರೊಟುಂಡಾ ಅವರು ಇಂದು ಮುಂಜಾನೆ ಅನಿರೀಕ್ಷಿತವಾಗಿ ನಿಧನರಾದರು ಎಂಬ ದುರಂತ ಸುದ್ದಿಯನ್ನು ನಮಗೆ ತಿಳಿಸಿದರು. ನಮ್ಮ ಪ್ರಾರ್ಥನೆಗಳು ಅವರ ಕುಟುಂಬದೊಂದಿಗೆ ಇದೆ” ಎಂದು ತ್ರಿಪಲ್ ಎಚ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!