February 3, 2026

ಕಾಸರಗೋಡು: ಶಾಲಾ ವಾಹನದಡಿಗೆ ಬಿದ್ದು ಬಾಲಕಿ ಮೃತ್ಯು

0
image_editor_output_image-709693414-1692942676277.jpg

ಕಾಸರಗೋಡು: ಶಾಲಾ ವಾಹನದಡಿಗೆ ಬಿದ್ದು ನರ್ಸರಿ ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ ಆ.24ರಂದು ಕಾಸರಗೋಡಿನ ಕಂಬಾರ್ ಸಿರಿಬಾಗಿಲು ಎಂಬಲ್ಲಿ ನಡೆದಿದೆ.

ಸಿರಿ ಬಾಗಿಲಿನ ಮುಹಮ್ಮದ್ ಸುಬೈರ್ ಎಂಬವರ ಪುತ್ರಿ ಆಯಿಷಾ ಸೆಯಾ (4) ಮೃತ ವಿದ್ಯಾರ್ಥಿನಿ.

ಶಾಲೆ ಬಿಟ್ಟು ಸ್ಕೂಲ್ ವಾಹನದಲ್ಲಿ ಮನೆ ಬಳಿ ಬಾಲಕಿಯನ್ನು ಇಳಿಸಿ ಬಸ್ಸನ್ನು ಹಿಂದಕ್ಕೆ ತೆಗೆಯುತ್ತಿದ್ದಾಗ ಅದೇ ಬಸ್ಸಿನಡಿಗೆ ಆಯಿಷಾ ಬಿದ್ದಿದ್ದಾಳೆ.

ಈ ವೇಳೆ ಸ್ಥಳೀಯರು ಕೂಡಲೇ ವಿದ್ಯಾರ್ಥಿನಿಯನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ತಲುಪಿಸಿದರಷ್ಟರಲ್ಲಿ ಬಾಲಕಿ ಮೃತಪಟ್ಟಿದ್ದಳು ಎಂದು ತಿಳಿದುಬಂದಿದೆ.

ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!