September 21, 2026

ಹಾರ್ಮುಜ್  ತೆರೆಯದಿದ್ದರೆ ಇರಾನ್  ರಾಷ್ಟ್ರವನ್ನೇ ನಾಶಪಡಿಸುತ್ತೇನೆ: ಮತ್ತೊಮ್ಮೆ ಡೊನಾಲ್ಡ್ ಟ್ರಂಪ್ ಎಚ್ಚರಿಕೆ

0
image_editor_output_image1290220496-1789969702104

ವಾಷಿಂಗ್ಟನ್/ತೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಅಮೆರಿಕ ಹಾಗೂ ಇರಾನ್ ನಡುವಿನ ಸಮರ ತೀವ್ರ ಸ್ವರೂಪ ಪಡೆದುಕೊಂಡಿದೆ. ವಾಷಿಂಗ್ಟನ್ ತನ್ನ ಷರತ್ತುಗಳನ್ನು ಒಪ್ಪಿಕೊಳ್ಳದ ಹೊರತು ಜಗತ್ತಿನ ಅತ್ಯಂತ ಪ್ರಮುಖ ತೈಲ ಸಾರಿಗೆ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ಯನ್ನು ಮರು ತೆರೆಯುವುದಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ.


ಇದಕ್ಕೆ ಪ್ರತಿಯಾಗಿ ಇರಾನ್ ಮೇಲಿನ ನೌಕಾ ದಿಗ್ಬಂಧನವನ್ನು ಮತ್ತಷ್ಟು ಬಿಗಿಗೊಳಿಸಿರುವ ಅಮೆರಿಕ ಪಡೆಗಳು, ಜಲಸಂಧಿಯ ಬಳಿ ಸಂಚರಿಸುತ್ತಿದ್ದ 109 ವಾಣಿಜ್ಯ ಹಡಗುಗಳ ಮಾರ್ಗವನ್ನು ಬಲವಂತವಾಗಿ ಬದಲಾಯಿಸಿವೆ.

ಉಭಯ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಬೆನ್ನಲ್ಲೇ ಈ ಕುರಿತು ಹೇಳಿಕೆ ನೀಡಿರುವ ಇರಾನ್ ಸಂಸತ್ ಸ್ಪೀಕರ್ ಮೊಹಮ್ಮದ್ ಬಘೇರ್ ಘಾಲಿಬಾಫ್, “ಮಧ್ಯವರ್ತಿಗಳ ಮೂಲಕ ಅಮೆರಿಕಕ್ಕೆ ನಮ್ಮ ಬೇಡಿಕೆಗಳನ್ನು ತಲುಪಿಸಲಾಗಿದೆ. ಇರಾನ್ ಜನರ ಅವಿಭಾಜ್ಯ ಹಕ್ಕುಗಳನ್ನು ಗುರುತಿಸುವವರೆಗೆ ಮತ್ತು ಅಮೆರಿಕ ತನ್ನ ಬದ್ಧತೆಗಳನ್ನು ಈಡೇರಿಸುವವರೆಗೆ ಹಿಂದಿನ ಮಾತುಕತೆಯ ಚೌಕಟ್ಟಿಗೆ ಮರಳುವ ಅಥವಾ ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವ ಪ್ರಶ್ನೆಯೇ ಇಲ್ಲ” ಎಂದು ಖಡಕ್ ಆಗಿ ತಿಳಿಸಿದ್ದಾರೆ.

ಇದೇ ವೇಳೆ ಇರಾನ್‌ನ ‘ಖಾತಮ್ ಅಲ್-ಅನ್ಬಿಯಾ’ ಕೇಂದ್ರ ಕಮಾಂಡ್ ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದು, “ಅಮೆರಿಕ ಯಾವುದೇ ಸೇನಾ ಕ್ರಮ ಕೈಗೊಂಡರೆ ಈ ಪ್ರದೇಶದಲ್ಲಿರುವ ಅದರ ಎಲ್ಲ ನೆಲೆಗಳು ಮತ್ತು ವಾಣಿಜ್ಯ ಹಿತಾಸಕ್ತಿಗಳ ಮೇಲೆ ನಿರಂತರ, ಪರಿಣಾಮಕಾರಿ ಹಾಗೂ ನೋವುಂಟುಮಾಡುವ ದಾಳಿಗಳನ್ನು ನಡೆಸಲಾಗುವುದು. ಅಮೆರಿಕಕ್ಕೆ ಬೆಂಬಲ ನೀಡುವ ನೆರೆ ರಾಷ್ಟ್ರಗಳನ್ನೂ ಈ ಯುದ್ಧದ ಭಾಗಿಗಳು ಎಂದೇ ಪರಿಗಣಿಸಲಾಗುವುದು” ಎಂದಿದೆ.

 

Leave a Reply

Your email address will not be published. Required fields are marked *

error: Content is protected !!