ಬಾಣಂತಿಗೆ ಇಂಜೆಕ್ಷನ್ ಚುಚ್ಚಿ ಸಾಯಿಸಲು ಯತನ: ನಕಲಿ ನರ್ಸ್ ಬಂಧನ
ಕೇರಳ : ಆಗ ತಾನೆ ಮೊದಲ ಮಗುವಿಗೆ ಜನ್ಮ ನೀಡಿದ್ದ ಬಾಣಂತಿಗೆ ಖಾಲಿ ಇಂಜೆಕ್ಷನ್ ಚುಚ್ಚಿ ಸಾಯಿಸಲು ಯತ್ನಿಸಿದ ನಕಲಿ ನರ್ಸ್ಅನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಮೊದಲ ಮಗುವಿನ ಜನ್ಮ ನೀಡಿ ಕೆಲವೇ ದಿನವಾಗಿದ್ದ ಬಾಣಂತಿಗೆ ಖಾಲಿ ಇಂಜೆಕ್ಷನ್ ಚುಚ್ಚಿ ಸಾಯಿಸಲು ಪ್ರಯತ್ನಿಸಿದ ಘಟನೆ ಕೇರಳದ ತಿರುವನಲ್ಲಾದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ 30 ವರ್ಷದ ಅನುಷಾ ಎನ್ನುವ ಮಹಿಳೆಯನ್ನು ಬಂಧಿಸಲಾಗಿದೆ.





