ಕಾಸರಗೋಡು: ಜ.7 ರಿಂದ 17 ರ ವರೆಗೆ ತಂಙಳ್ ಉಪ್ಪಾಪ ಉರೂಸ್
ಕಾಸರಗೋಡು: ನೆಲ್ಲಿಕ್ಕುನ್ನು ಮುಹಿಯಿದ್ದೀನ್ ಜಮಾಅತ್ ಮಸೀದಿಯಲ್ಲಿ ಅಂತಿಮ ವಿಶ್ರಾಂತಿ ಪಡೆಯುತ್ತಿರುವ ವಲಿಯಲ್ಲಾಹಿ ಮುಹಮ್ಮದ್ ಹನೀಫ್ ತಂಙಳ್ ಉಪ್ಪಾಪ (ರ.ಅ) ರವರ ಸ್ಮರಣೆಯ ಪ್ರಯುಕ್ತ ನಡೆಸಿಕೊಂಡು ಬರುತ್ತಿರುವ ಉರೂಸ್ ಕಾರ್ಯಕ್ರಮವು 2026 ಜನವರಿ 7ರಿಂದ 17ರ ತನಕ ಆಚರಿಸಲಾಗುತ್ತದೆ.
ಉರೂಸ್ ಕಾರ್ಯಕ್ರಮ ಪ್ರಯುಕ್ತ ನೇರ್ಚೆ ಹಾಗೂ 11 ದಿವಸಗಳ ಮತಪ್ರವಚನ ಕಾರ್ಯಕ್ರಮವು ನಡೆಯಲಿದ್ದು, ಅನೇಕ ಪ್ರಖ್ಯಾತ ಪ್ರಮುಖ ಪಂಡಿತರು, ವಾಗ್ಮಿಗಳು ಹಾಗೂ ಅನೇಕ ಸೂಫಿವರ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿದ್ದಾರೆ. ಜನವರಿ 18 ಆದಿತ್ಯವಾರ ಬೆಳಗ್ಗೆ ಬೃಹತ್ ಅನ್ನದಾನ ಕಾರ್ಯಕ್ರಮವ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.





