April 19, 2026

ಇರಾನ್ ಸಂಗ್ರಹಾಗಾರದಲ್ಲಿರುವ ಡ್ರೋನ್‌ಗಳು, ಇತರ ಶಸ್ತ್ರಾಸ್ತ್ರಗಳ ವಿಡಿಯೋ ಪ್ರದರ್ಶಿಸಿದ ಇರಾನ್

0
image_editor_output_image1405936777-1772496502568.jpg

ಟೆಹ್ರಾನ್: ಇಸ್ರೇಲ್, ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷವು ಮತ್ತಷ್ಟು ಉದ್ವಿಗ್ನಗೊಳ್ಳುವ ಸಾಧ್ಯತೆ ಇದೆ. ಕಾರಣ, ಈ ಇರಾನ್ ವಿಡಿಯೋ ಬಿಡುಗಡೆ ಮಾಡಿದೆ.

ಇರಾನ್ ಸಂಗ್ರಹಾಗಾರದಲ್ಲಿರುವ ಡೋನ್‌ಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ವಿಡಿಯೋ ಪ್ರದರ್ಶಿಸುತ್ತಿದ್ದು, ಇದು ಅಮೆರಿಕ ಮತ್ತು ಇಸ್ರೇಲ್ ಮೇಲೆ ದಾಳಿಗೆ ಸನ್ನದ್ಧವಾಗಿದೆ ಎಂದು ಅಲ್ಲಿನ ಸರ್ಕಾರ ಮಾಧ್ಯಮವೊಂದು ವರದಿ ಮಾಡಿದೆ. ಮುಂದುವರಿದು ವಿಡಿಯೋದಲ್ಲಿ, ಇರಾನ್ ಹಾರಿಬಿಟ್ಟ ಡೋನ್‌ಗಳು, ಕ್ಷಿಪಣಿಗಳು ಇಸ್ರೇಲ್ ಮತ್ತು ಅಮೆರಿಕದ ನೆಲೆಗಳನ್ನು ಧ್ವಂಸ ಮಾಡುತ್ತಿರುವುದನ್ನೂ ಕಾಣಬಹುದು.

ಎರಡು ದಿನಗಳ ಹಿಂದೆ ತನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿಯನ್ನು ಅಮೆರಿಕ ಮತ್ತು ಇಸ್ರೇಲ್ ಜಂಟಿ ಪಡೆಗಳು ಹತ್ಯೆ ಮಾಡಿದ್ದಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಪ್ರತಿಜ್ಞೆ ಮಾಡಿದೆ. ಇದರ ಸಂಕೇತವಾಗಿ ಇಂದು ಅದು ತನ್ನಲ್ಲಿನ ಶಸ್ತ್ರಾಸ್ತ್ರಗಳನ್ನು ವಿಶ್ವಕ್ಕೆ ತೋರಿಸಿದೆ.

Leave a Reply

Your email address will not be published. Required fields are marked *

error: Content is protected !!