April 19, 2026

ಪ್ರೇಮ ವೈಫಲ್ಯ: ವಿದೇಶದಲ್ಲಿದ್ದ ಮಂಗಳೂರಿನ ಯುವಕ ಒಮಾನ್ ನಲ್ಲಿ ಆತ್ಮಹತ್ಯೆ

0
image_editor_output_image-1283261945-1772522707456.jpg

ಒಮಾನ್: ಪ್ರೇಮ ವೈಫಲ್ಯ ಹಿನ್ನೆಲೆ ವಿದೇಶದಲ್ಲಿದ್ದ ಮಂಗಳೂರಿನ ಯುವಕನೋರ್ವ ಪ್ರಾಣ ಕಳೆದುಕೊಂಡಿದ್ದಾನೆ.

ಪುನೀತ್ ಪೂಜಾರಿ (32) ಮೃತ ಯುವಕ. ಮಂಗಳೂರಿನ ಸೋಮೇಶ್ವರದ ಪುನೀತ್ ಕೆಲಸದ ನಿಮಿತ್ತ ಒಮನ್ ದೇಶದಲ್ಲಿದ್ದನು.

ಕಳೆದ ಒಂದೂವರೆ ವರ್ಷಗಳಿಂದ ಪುನೀತ್ ಪೂಜಾರಿ ಒಮಾನ್ ದೇಶದಲ್ಲಿ ಲಿಫ್ಟ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದನು. ಪುನೀತ್ ಪೂಜಾರಿ ಒಂದೂವರೆ ತಿಂಗಳ ಹಿಂದೆಯಷ್ಟೇ ಊರಿಗೆ ಬಂದು ಹಿಂದಿರುಗಿದ್ದನು. ಇದೀಗ ಪ್ರೇಮ ವೈಫಲ್ಯದಿಂದ ಆತ್ಮ-ಹತ್ಯೆ ಮಾಡಿಕೊಂಡಿದ್ದಾನೆ.

ಸೋಮೇಶ್ವರ ನಿವಾಸಿಗಳಾದ ಚಂದ್ರ ಮತ್ತು ದೀಪಾ ದಂಪತಿಯ ಪುತ್ರನಾಗಿರುವ ಪುನೀತ್, ಕಳೆದ ನಾಲ್ಕು ವರ್ಷಗಳಿಂದ ಉರ್ವಾ ನಿವಾಸಿ ಯುವತಿಯನ್ನು ಪ್ರೀತಿಸುತ್ತಿದ್ದನು. ಸೋಶಿಯಲ್ ಮೀಡಿಯಾ ಖಾತೆಗಳಲ್ಲಿಯೂ ಯುವತಿ ಜೊತೆಗಿನ ಫೋಟೋಗಳನ್ನು ಸಹ ಶೇರ್ ಮಾಡಿಕೊಂಡಿದ್ದನು.

Leave a Reply

Your email address will not be published. Required fields are marked *

error: Content is protected !!