April 17, 2026

ಇರಾನ್ ಜೊತೆ ಸಿ.ಎಂ-302 ಸೂಪರ್‌ಸಾನಿಕ್ ನೌಕಾ ನಿಗ್ರಹ ಕ್ಷಿಪಣಿಗಳ ಮಾರಾಟ ಒಪ್ಪಂದ ನಡೆದಿಲ್ಲ: ಚೀನಾ ಸ್ಪಷ್ಟನೆ

0
image_editor_output_image1280407908-1772493859356.jpg

ಬೀಜಿಂಗ್: ಅಮೆರಿಕ-ಇಸ್ರೇಲ್ ದಾಳಿ ನಡೆಸುವ ಮೊದಲು ಇರಾನ್ ಜೊತೆ ಸಿ.ಎಂ-302 ಸೂಪರ್‌ಸಾನಿಕ್ ನೌಕಾ ನಿಗ್ರಹ ಕ್ಷಿಪಣಿಗಳ ಮಾರಾಟ ಒಪ್ಪಂದವನ್ನು ಅಂತಿಮಗೊಳಿಸಲಾಗಿತ್ತು ಎಂಬ ವರದಿಗಳನ್ನು ಚೀನಾ ಸೋಮವಾರ ನಿರಾಕರಿಸಿದೆ.

‘ಈ ಕುರಿತ ವರದಿಗಳು ಸತ್ಯಾಂಶವನ್ನು ಹೊಂದಿಲ್ಲ. ಜವಾಬ್ದಾರಿಯುತ ದೇಶವಾದ ಚೀನಾ ಯಾವಾಗಲೂ ಅಂತರರಾಷ್ಟ್ರೀಯ ಬಾಧ್ಯತೆಗಳನ್ನು ಪಾಲಿಸುತ್ತದೆ. ದುರುದ್ದೇಶಪೂರಿತ ಸಹಭಾಗಿತ್ವ ಮತ್ತು ತಪ್ಪು ಮಾಹಿತಿ ಹಂಚಿಕೆಯನ್ನು ಚೀನಾ ವಿರೋಧಿಸುತ್ತದೆ. ಇದು ಸುಳ್ಳು ಮಾಹಿತಿಯನ್ನು ಹರಡುವ ಅಭಿಯಾನದ ಭಾಗವಾಗಿದೆ’ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾವ್ ನಿಂಗ್ ಅವರು ತಿಳಿಸಿದ್ದಾರೆ.

`ಉದ್ವಿಗ್ನತೆಯನ್ನು ಶಮನಗೊಳಿಸಲು ಸಂಬಂಧಿಸಿದ ದೇಶಗಳು ಸೂಕ್ತ ನಿರ್ಧಾರ ಕೈಗೊಳ್ಳುವ ಭರವಸೆ ಇದೆ’ ಎಂದು ಅವರು ಹೇಳಿದ್ದಾರೆ.

ಒಪ್ಪಂದದ ಕುರಿತ ಮಾಧ್ಯಮ ವರದಿಗಳು ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆ ಉಂಟಾಗಿರುವ ಕಾರಣಕ್ಕೆ ಮಹತ್ವ ಪಡೆದಿವೆ.

ಅದಲ್ಲದೆ, ಖಾಮಿನೈ ಹತ್ಯೆಯನ್ನು ಭಾರತ ಖಂಡನೆ ಮಾಡಿಲ್ಲ. ಉತ್ತಮ ವ್ಯಾಪಾರ ಹೊಂದಿರುವ ಇಂಡಿಯ, ರಷ್ಯಾ, ಚೀನಾ ರಾಷ್ಟ್ರಗಳು ಇರಾನ್ ಬೆಂಬಲಕ್ಕೆ ನಿಲ್ಲದಿರುವುದು ದುರಂತ.

Leave a Reply

Your email address will not be published. Required fields are marked *

error: Content is protected !!