April 18, 2026

UAE ರಾಜಧಾನಿ ಅಬುಧಾಬಿಯ ಮುಸಾಫಾ ಇಂಧನ ಟ್ಯಾಂಕ್ ಟರ್ಮಿನಲ್ ಗೆ ಇರಾನ್ ಡೋನ್ ದಾಳಿ

0
image_editor_output_image17503751-1772493588399.jpg

ಅಬುಧಾಬಿ : UAE ರಾಜಧಾನಿ ಅಬುಧಾಬಿಯ ಮುಸಾಫಾ ಕೈಗಾರಿಕಾ ಪ್ರದೇಶದಲ್ಲಿರುವ ಇಂಧನ ಟ್ಯಾಂಕ್ ಟರ್ಮಿನಲ್ ಗೆ ಡೋನ್ ದಾಳಿ ಮಾಡಿದ ಘಟನೆ ಸೋಮವಾರ ನಡೆದಿದೆ.

ದಾಳಿಯಾಗುತ್ತಿದ್ದಂತೆ ಒಮ್ಮೆಲೇ ಬೆಂಕಿ ಕಾಣಿಸಿಕೊಂಡಿತು. ತಕ್ಷಣ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದ್ದು, ಯಾವುದೇ ಗಾಯಗಳು ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ

ಅಬುಧಾಬಿ ಮಾಧ್ಯಮ ಕಚೇರಿ ಪ್ರಕಟಿಸಿದ ಹೇಳಿಕೆಯಲ್ಲಿ “ಮುಸಾಫಾ ಇಂಧನ ಟ್ಯಾಂಕ್ ಟರ್ಮಿನಲ್ ಅನ್ನು ಡೋನ್ ಗುರಿಯಾಗಿಸಿಕೊಂಡು ದಾಳಿ ನಡೆಸಿದ ಪರಿಣಾಮ ಬೆಂಕಿ ಕಾಣಿಸಿಕೊಂಡಿತು. ಅಗ್ನಿಶಾಮಕ ಮತ್ತು ತುರ್ತು ಪ್ರತಿಕ್ರಿಯಾ ತಂಡಗಳು ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಿಸಿದರು” ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *

error: Content is protected !!