March 3, 2026

ಸೌದಿ, ಕತಾರ್ ಸಹಿತ ಹಲವಾರು ಅರಬ್‌ ರಾಷ್ಟ್ರಗಳು ಅಮೆರಿಕದ ಜೊತೆ ಸೇರಿದೆ: ಡೊನಾಲ್ಡ್‌ ಟ್ರಂಪ್‌

0
image_editor_output_image-1654126624-1772494594119.jpg

ವಾಷಿಂಗ್ಟನ್‌: ಹಲವಾರು ಅರಬ್‌ ರಾಷ್ಟ್ರಗಳು ಅಮೆರಿಕದ ಜೊತೆ ಸೇರಲು ಬಯಸುತ್ತಿವೆ ಮತ್ತು ಇರಾನ್‌ ವಿರುದ್ಧದ ದಾಳಿ 4-5 ವಾರಗಳವರೆಗೆ ಮುಂದುವರಿಯಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ಬಹರೇನ್‌, ಜೋರ್ಡಾನ್, ಕುವೈತ್, ಕತಾರ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಸೇರಿದಂತೆ ಪ್ರಾದೇಶಿಕ ರಾಜ್ಯಗಳನ್ನು ಗುರಿಯಾಗಿಸಿಕೊಂಡು ಇರಾನ್‌ ದಾಳಿ ಮಾಡಿದೆ. ಈಗ ಈ ದೇಶಗಳು ತಮ್ಮ ನಿಲುವು ಬದಲಾಯಿಸಿ ಅಮೆರಿಕ ಜೊತೆ ಸೇರಲು ಬಯಸುತ್ತೇವೆ ಎಂದು ಹೇಳಿರುವುದು ನನಗೆ ಬಹಳ ಆಶ್ಚರ್ಯ ತಂದಿದೆ ಎಂದು ತಿಳಿಸಿದರು.

ಇರಾನ್ ನಾಗರಿಕ ಪ್ರದೇಶಗಳ ಮೇಲೆ ದಾಳಿ ಮಾಡಿದಕ್ಕೆ ಈ ದೇಶಗಳು ಆಕ್ರೋಶಗೊಂಡಿವೆ. ಈ ದಾಳಿಯ ನಂತರ ಅವರ ನಿಲುವುಗಳಲ್ಲಿ ಅಚ್ಚರಿಯ ಬದಲಾವಣೆಯಾಗಿದೆ. ಇಸ್ರೇಲ್ ಮೇಲಿನ ಇರಾನ್‌ ದಾಳಿಯನ್ನು ಈ ದೇಶಗಳು ಖಂಡಿಸಿದ್ದರೂ ಹೆಚ್ಚಿನವು ಇಲ್ಲಿಯವರೆಗೆ ಮಿಲಿಟರಿ ಸಂಯಮವನ್ನು ಹೊಂದಿವೆ ಎಂದರು.

Leave a Reply

Your email address will not be published. Required fields are marked *

You may have missed

error: Content is protected !!