ಮೂಡಿಗೆರೆ: ಮರದ ಕಡಿಯುತ್ತಿದ್ದಾಗ ವಿದ್ಯುತ್ ತಂತಿ ಸ್ಪರ್ಶ, ಮರದಲ್ಲಿಯೇ ಪ್ರಾಣಬಿಟ್ಟ ವ್ಯಕ್ತಿ
ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಹುಯಿಲುಮನೆ ಗ್ರಾಮದಲ್ಲಿ ವಿದ್ಯುತ್ ತಂತಿಗೆ ಮರದ ಕೊಂಬೆಗಳು ತಗಲುದ್ದನ್ನು ಕಡಿಯಲು ಹೋಗಿ ವಿದ್ಯುತ್ ಸ್ಪರ್ಶದಿಂದ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.
ಮೃತರನ್ನು ಲೋಕಪ್ಪ ಗೌಡ (56) ಎಂದು ಗುರುತಿಸಲಾಗಿದೆ.
ವಿದ್ಯುತ್ ತಂತಿಗೆ ಮರದ ಕೊಂಬೆಗಳು ತಗಲುದ್ದನ್ನು ಕಡಿಯಲು ಹೋಗಿ ಮರದ ಮೇಲೆಯೇ ಪ್ರಾಣ ಬಿಟ್ಟರು. ಮಲ್ನಾಡ ಭಾಗದಲ್ಲಿ ವಿದ್ಯುತ್ ಸ್ಪರ್ಶದಿಂದ ಹಲವಾರು ಜನರು ಪ್ರಾಣ ಕಳೆದುಕೊಂಡ ನಿದರ್ಶನಗಳಿವೆ.
ಸ್ಥಳಕ್ಕೆ ಬಾಳೂರು ಪೊಲೀಸರು ಹಾಗೂ ಮೆಸ್ಕಾಂ ಸಿಬ್ಬಂದಿ ಭೇಟಿ ನೀಡಿದರು.





