December 19, 2025

ಪುತ್ತೂರು-ವಿಟ್ಲ ಟೋಪ್ಕೋ ಝಂಝಂ ಜ್ಯುವೆಲ್ಲರಿಯಲ್ಲಿ ವರ್ಷಾಚರಣೆ ಸಂಭ್ರಮ ಇನ್ನೂ ಒಂದು ದಿನ ಮಾತ್ರ:
1% ಮೇಕಿಂಗ್ ಚಾರ್ಜಸ್’ ಸಹಿತ‌ ಭರಪೂರ ಕೊಡುಗೆಗೆ ಗ್ರಾಹಕರಿಂದ ಉತ್ತಮ ಸ್ಪಂಧನೆ

0
IMG-20230806-WA0012

ಪುತ್ತೂರು: ನವನವೀನ ವಿನ್ಯಾಸದ ಚಿನ್ನಾಭರಣ ಮಾರಾಟ ರಂಗದಲ್ಲಿ  35ವರ್ಷಗಳ ಸೇವಾ ಪರಂಪರೆ ಮತ್ತು ವಿಶ್ವಾಸವನ್ನು ಹೊಂದಿರುವ ‘ಟೋಪ್ಕೊ ಝಂಝ’ ಜ್ಯುವೆಲ್ಲರಿಯ  ಪುತ್ತೂರಿನ ಕೋರ್ಟ್ ರಸ್ತೆಯ ಫಾರ್ಚೂನ್ ಮಾಲ್ ನಲ್ಲಿರುವ ಶಾಖೆಯ ಏಳನೇ ವರ್ಷಾಚರಣೆ ಪ್ರಯುಕ್ತ  ಗ್ರಾಹಕರಿಗೆ ‘1% ಮೇಕಿಂಗ್ ಚಾರ್ಜಸ್’ ಅನ್ನುವ ವಿಶೇಷ ಕೊಡುಗೆಗಳನ್ನು ಆ.೧ರಿಂದ ನೀಡಲು ಆರಂಭಿಸಿದೆ.
ಈ ಕೊಡುಗೆಗಳಿಗೆ ಗ್ರಾಹಕರಿಂದ ಉತ್ತಮ ಸ್ಪಂಧನೆ ವ್ಯಕ್ತವಾಗಿದ್ದು ಆ.೭ರಂದು ವರ್ಷಾಚರಣೆ ಸಂಭ್ರಮಕ್ಕೆ ತೆರೆಬೀಳಲಿದೆ.

ಟೋಪ್ಕೊ ಸಂಸ್ಥೆಯು’1% ಮೇಕಿಂಗ್ ಚಾರ್ಜಸ್’ ಅನ್ನುವ ಕೊಡುಗೆಯನ್ನು ಗ್ರಾಹಕರ ವೈವಾಹಿಕ ಸನ್ನಿವೇಶಗಳನ್ನು ಮತ್ತಷ್ಟು ಸಂಭ್ರಮವಾಗಿಸುವ ನಿಟ್ಟಿನಲ್ಲಿ ಆಯೋಜನೆ ಮಾಡಿತ್ತು. ಈ ವಿಶೇಷ ಕೊಡುಗೆ ವಿವಾಹಕ್ಕಾಗಿ ಚಿನ್ನಾಭರಣ ಖರೀದಿ ಮಾಡುವ ಗ್ರಾಹಕರಿಗೆ ನೀಡಲಾಗುತ್ತಿದ್ದು, ಮದುವೆ ಆಭರಣ ಖರೀದಿಗಾಗಿ ಮುಂಗಡ ಹಣ ಪಾವತಿಸಿ ಬುಕ್ಕಿಂಗ್ ಮಾಡಿದಲ್ಲಿ ೧% ಮೇಕಿಂಗ್ ಚಾರ್ಜ್ ಸ್ ಮೂಲಕ ತಮ್ಮಿಷ್ಟದ ಚಿನ್ನದ ಆಭರಣವನ್ನು ಕೊಳ್ಳುವ ಸುವರ್ಣಾವಕಾಶವನ್ನು ಸಂಸ್ಥೆ ಕಲ್ಪಿಸಿದೆ. ಈ ಕೊಡುಗೆ ಪುತ್ತೂರಿನ ಕೋರ್ಟ್ ರಸ್ತೆಯ ಫಾರ್ಚೂನ್ ಮಾಲ್ ನಲ್ಲಿರುವ ‘ಟೋಪ್ಕೋ ಝಂಝಂ’ ಹಾಗೂ ವಿಟ್ಲದ ಎಂಪಾಯರ್ ಮಾಲ್ ನಲ್ಲಿ ಇರುವ ‘ಟೋಪ್ಕೊ ಜ್ಯುವೆಲ್ಲರಿ’ಯಲ್ಲಿ  ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಟೋಪ್ಕೋ ಜ್ಯುವೆಲ್ಲರಿಯ ಪುತ್ತೂರು ಹಾಗೂ ವಿಟ್ಲ ಶಾಖೆಯನ್ನು ಸಂಪರ್ಕಿಸಬಹುದಾಗಿದೆ.

ಟೋಪ್ಕೊ ನಡೆದು ಬಂದ ಹಾದಿ…

ಟೋಪ್ಕೋ ಝಮ್ ಝಮ್ ಜ್ಯುವೆಲ್ಲರಿ ಕಳೆದ ೩೫ ವರ್ಷಗಳ ಹಿಂದೆ ಕೇರಳದ ಕಣ್ಣೂರಿನ ಮಟ್ಟಣ್ಣೂರು ಎಂಬಲ್ಲಿ ಪ್ರಾರಂಭಗೊಂಡಿದ್ದು ನಂತರ ಕಣ್ಣೂರಿನಲ್ಲಿ ಬೃಹತ್ ಶೋರೂಮ್ ತೆರೆಯಲಾಯಿತು. ಆ ಬಳಿಕ ವಿಟ್ಲದಲ್ಲಿ ಕರ್ನಾಟಕದ ಪ್ರಥಮ ಶೋರೂಮ್ ಆರಂಭವಾಯಿತು. ನಂತರ ಕೊಡಗಿನ ಕುಶಾಲನಗರದಲ್ಲಿ ಸ್ಥಾಪಿಸಲಾಯಿತು. ಸಂಸ್ಥೆಯ ೫ನೇ ಮಳಿಗೆ ಪುತ್ತೂರಿನಲ್ಲಿ ಆರಂಭವಾಯಿತು. ಆ ಬಳಿಕದ ದಿನಗಳಲ್ಲಿ ಆರನೇ ಮಳಿಗೆಯನ್ನು  ಪಿರಿಯಾಪಟ್ಟಣದಲ್ಲಿ ಆರಂಭಿಸಲಾಯಿತು. ಜನರೊಂದಿಗಿನ ಪ್ರೀತಿ-ವಿಶ್ವಾಸ, ನ್ಯಾಯಯುತ ವ್ಯವಹಾರ, ಸುದೀರ್ಘ ವರ್ಷಗಳ ಪರಂಪರೆ ಟೋಪ್ಕೋ ಝಮ್ ಝಮ್ ಜ್ಯುವೆಲ್ಲರಿಯ ಯಶಸ್ಸಿನ ಗುಟ್ಟಾಗಿದೆ ಎನ್ನುತ್ತಾರೆ ಸಂಸ್ಥೆಯ ಮಾಲಕರು.

ಟೋಪ್ಕೋ ಪರಂಪರೆ:
ಟೋಪ್ಕೋ ಝಮ್ ಝಮ್ ಜ್ಯುವೆಲ್ಲರಿಯಲ್ಲಿ ಶೇಕಡಾ ೧೦೦ ೯೧೬ ಹಾಲ್ ಮಾರ್ಕ್ಡ್ ಪರಿಶುದ್ಧ ವಿನೂತನ ಹಾಗೂ ಸಾಂಪ್ರದಾಯಿಕ ಚಿನ್ನಾಭರಣಗಳ ಅತಿದೊಡ್ಡ ಸಂಗ್ರಹ, ಐಜಿಐ ಪ್ರಮಾಣೀಕೃತ  ವಜ್ರಾಭರಣಗಳ ವಿಶೇಷ ಕಲೆಕ್ಷನ್ಸ್, ೯೨.೫  ಇಟಾಲಿಯನ್ ಬೆಳ್ಳಿ ಆಭರಣಗಳು ಹಾಗೂ ಬೆಳ್ಳಿ ಉಡುಗೊರೆಗಳು, ರೇಡೋ, ಟಿಸ್ಸೋಟ್, ಕ್ಯಾಸ್ಯೋ ಮೊದಲಾದ ಬ್ರಾಂಡೆಡ್ ವಾಚುಗಳು, ಖರೀದಿಯ ನಂತರವೂ ವಸ್ತುಗಳ ಮೇಲೆ ಅತ್ಯುತ್ತಮ ಸೇವೆ, ಜರ್ಮನ್ ನಿರ್ಮಿತ ಅತ್ಯಾಧುನಿಕ ಕ್ಯಾರೆಟ್ ಅನಲೈಸರ್ ಯಂತ್ರ ಟೋಪ್ಕೊ ವಿಶೇಷತೆಯಾಗಿದೆ.
ಆಭರಣಗಳ ಮೈಂಟೆನೆನ್ಸ್ ಉಚಿತವಾಗಿ ಮಾಡಿಕೊಡುವ ವ್ಯವಸ್ಥೆಯು ಸಂಸ್ಥೆಯ ವತಿಯಿಂದ ಇದೆ.

ವಿವಾಹ  ಮುಂಗಡ ಬುಕ್ಕಿಂಗ್  ಯೋಜನೆ:
ಪ್ರತಿ ತಿಂಗಳು ಕನಿಷ್ಠ ೫೦೦ರೂಪಾಯಿ ಅಂತೆ ಒಂದು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟು ಪಾವತಿ ಮಾಡಿ ಆಯಾ ದಿನದ ದರದ ಚಿನ್ನವನ್ನು  ಪಡೆಯಬಹುದಾಗಿದೆ‌. ಬಳಿಕ ಚಿನ್ನಾಭರಣವನ್ನು ಕೊಳ್ಳುವ ವೇಳೆ ತಯಾರಿಕಾ‌ವೆಚ್ಚದ ಮೇಲೆ ೨೫% ವರೆಗೆ ರೀಯಾಯಿತಿ ಪಡೆಯಬಹುದಾಗಿದೆ.
ಈ ಯೋಜನೆಯಲ್ಲಿ ಪ್ರತೀ ತಿಂಗಳು ಡ್ರಾ ನಡೆಯಲಿದ್ದು ಅದೃಷ್ಟ ಗ್ರಾಹಕರಿಗೆ ಗ್ರಹಪಯೋಗಿ ವಸ್ತುಗಳನ್ನು ಗೆಲ್ಲುವ ಅವಕಾಶವಿದೆ.

Leave a Reply

Your email address will not be published. Required fields are marked *

You may have missed

error: Content is protected !!