ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನ,ಸಹ ಸಂಘಟನೆಗಳ ವತಿಯಿಂದ ಕೆಸರ್ಡ್ ಒಂಜಿ ದಿನೊ ದಶಮಾನೋತ್ಸವ ಕಾರ್ಯಕ್ರಮ
ವಿಟ್ಲ: ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನ ಹಾಗೂ ಸಹ ಸಂಘಟನೆಗಳ ವತಿಯಿಂದ ಶ್ರೀ ಕ್ಷೇತ್ರ ದ ಧರ್ಮದರ್ಶಿ ಶ್ರೀ ಕೃಷ್ಣ ಕುಕ್ಕಾಜೆ ಅವರ ಮಾರ್ಗದರ್ಶನದಲ್ಲಿ ಕೆಸರ್ಡ್ ಒಂಜಿ ದಿನೊ ದಶಮಾನೋತ್ಸವ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದ ಕ್ಷೇತ್ರದ ಧರ್ಮದರ್ಶಿ ಶ್ರೀ ಕೃಷ್ಣ ಕುಕ್ಕಾಜೆ ತುಳುನಾಡಿನ ಸಂಸ್ಕೃತಿ, ಆಚಾರ,ವಿಚಾರ, ಆರಾಧನೆ, ನಂಬಿಕೆಗಳು, ಕೃಷಿ ಸಂಸ್ಕೃತಿ ಅತ್ಯಾಧುನಿಕತೆಯ ಮಧ್ಯೆ ನಲುಗಿ, ನಶಿಸಿ ಹೋಗ ಬಾರದೆಂಬ ದೃಷ್ಟಿಯಿಂದ ಗದ್ದೆಯಲ್ಲಿ ಕೆಸರ್ಡ್ ಒಂಜಿ ದಿನೊ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಯುವ ಜನಾಂಗ, ಮಕ್ಕಳು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ನಮ್ಮ ಹಿರಿಯರು ಸಾಗಿ ಬಂದ ಬದುಕಿನ ದಾರಿಯ ಬಗ್ಗೆ ಸಿಂಹಾವಲೋಕನ ಮಾಡಿದ ಅನುಭವ ವೇದ್ಯವಾಗುವುದು.
ತುಳುನಾಡಿನ ಆಟಿ ತಿಂಗಳ ಪ್ರಾಕೃತಿಕ ವೈಪರೀತ್ಯದಲ್ಲಿ ಹಿರಿಯರು ಅನುಭವಿಸಿದ ಕಷ್ಟದ ದಿನಗಳು, ಆಟಿ ತಿಂಗಳ ವಿಶೇಷ ತಿಂಡಿ ತಿನಿಸುಗಳ, ಒಳಾಂಗಣ ಹಾಗೂ ಹೊರಾಂಗಣ ಕ್ರೀಡೆ, ಜಾನಪದೀಯ ಆಚರಣೆ, ಆರಾಧನೆಯ ಬಗ್ಗೆ ತಿಳಿಯಲು ಕಾರ್ಯಕ್ರಮ ಪೂರಕವಾಗಿದೆ ಎಂದರು.
ಈ ಸಂದರ್ಭದಲ್ಲಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಮಾಣಿಲ ಗ್ರಾಮ ಪಂಚಾಯತ್ ಸದಸ್ಯ ಶ್ರೀಧರ ಬಾಳೆಕಲ್ಲು, ಶ್ರೀ ಕ್ಷೇತ್ರದ ಮೊಕ್ತೇಸರ ಎಂ.ಕೆ.ಕುಕ್ಕಾಜೆ, ಉದ್ಯಮಿ ಪುರುಷೋತ್ತಮ ಕಾರಾಜೆ, ಪುತ್ತಿಲ ಪರಿವಾರ ಮಾಣಿಲ ಘಟಕದ ಅಧ್ಯಕ್ಷ ಅಶೋಕ್ ಶೆಟ್ಟಿ ಬಿರ್ಕಾಪು, ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಪೂಜಾರಿ, ಉದ್ಯಮಿ ಸುಧಾಕರ ಪೂಜಾರಿ ಕೇಪು, ರಂಗಭೂಮಿ ಕಲಾವಿದ ರಾಜೇಶ್ ಮುಗುಳಿ, ಎಸ್ ಕೆಡಿಆರ್ ಡಿಪಿ ಸೇವಾ ಪ್ರತಿನಿಧಿ ಗುಲಾಬಿ ಇನ್ನಿತರರು ಇದ್ದರು.
ಎಲ್ಲಾ ವಿಭಾಗಗಳಲ್ಲಿ ಕ್ರೀಡಾ ಸ್ಪರ್ಧೆಗಳು ನಡೆದವು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಮಾಣಿಲ ಶಾಲಾ ವಿದ್ಯಾರ್ಥಿಗಳಿಗೆ ಅಭಿನಂದನೆ ನಡೆಯಿತು.






