ಪುತ್ತೂರು : ಏಳ್ಮುಡಿ ಪ್ರೊವಿಡೆನ್ಸ್ ಪ್ಲಾಝಾ ಸಂಕೀರ್ಣದಲ್ಲಿ ಪ್ರೊ ಪ್ರೆಸ್ಟೀಜ್ ಇದೀಗ ಸಂಪೂರ್ಣ ನವೀಕರಣಗೊಂಡು ಶುಭಾರಂಭ: ದ.ಕ ಜಿಲ್ಲೆಯ ಅತಿ ದೊಡ್ಡ ಸಂಸ್ಥೆ ಪ್ರೆಸ್ಟೀಜ್ ಇದೀಗ ಗ್ರಾಹಕರ ಸೇವೆಗೆ ಸಿದ್ದ
ಪುತ್ತೂರು: ಹೆಸರಾಂತ ಕಂಪನಿಯ ಟೈಲ್ಸ್ , ಸ್ಯಾನಿಟರಿವೇರ್ , ಸಿಪಿ ಫಿಟ್ಟಿಂಗ್ಸ್ ಸಹಿತ ಹಲವು ಬಗೆಯ ಸಾಮಾಗ್ರಿಗಳನ್ನು , ಸ್ಪರ್ಧಾತ್ಮಕ ದರದಲ್ಲಿ ಪೂರೈಸುತ್ತಿರುವ ಜಿಲ್ಲೆಯ ಅತಿದೊಡ್ಡ ಸಂಸ್ಥೆಯಾಗಿರುವ ಪ್ರೊವಿಡೆನ್ಸ್ ಪ್ಲಾಝಾ ಸಂಕೀರ್ಣದಲ್ಲಿ ವ್ಯವಹರಿಸುತ್ತಿರುವ ಪ್ರೊ ಪ್ರೆಸ್ಟೀಜ್ ಇದೀಗ ಸಂಪೂರ್ಣ ನವೀಕರಣಗೊಂಡು ಗುರುವಾರ ಶುಭಾರಂಭಗೊಂಡಿದೆ.

ಶ್ರೇಷ್ಟತೆ ಮತ್ತು ವಿಶ್ವಾಸದ 5 ವರ್ಷಗಳ ಸಂಭ್ರಮ. ಆಧುನಿಕ ಜೀವನ ಶೈಲಿಗೆ ರೂಪುಗೊಂಡ ಜಾಕ್ವಾರ್ ಎಕ್ಸ್ ಪೀರಿಯನ್ಸ್ ಸೆಂಟರ್ ಹಾಗೂ ವಿಶೇಷವಾಗಿ ಆಯ್ಕೆ ಮಾಡಿದ ಟೈಲ್ ಸಂಗ್ರಹ ಇಲ್ಲಿದೆ.
ಜಾಕ್ವಾರ್ ಗ್ರೂಪ್ ನ ಝೋನಲ್ ಮುಖ್ಯಸ್ಥರಾದ ಎಂ ಟಿ ಹೆಗ್ಡೆ ಉದ್ಘಾಟಿಸಿದರು.

ಪುತ್ತೂರು ಜೆ.ಕೆ ಕನ್ಸ್ರಕ್ಷನ್ ನ ಜೈ ಕುಮಾರ್ ಆರ್ ನಾಯರ್, ಮತ್ತು ಜಾಕ್ವಾರ್ ಗ್ರೂಫ್ ನ ಸೀನಿಯರ್ ಮ್ಯಾನೇಜರ್ ಲಕ್ಷ್ಮೀಕಾಂತ ಪೂಜಾರಿ ಉಪಸ್ಥಿತರಿದ್ದರು.
ಜಾಗ್ವಾರ್ ಬ್ರಾಚ್ ಹೆಡ್ ರಿಪೇರಿ
ಶ್ರೀ ಹರಿ, artize ನ ಪುನೀತ್ ವರ್ಮ, ಶಿವರಾಮ ಆಳ್ವ, ಡಾ. ರವೀದ್ರ, ಚಂದ್ರಹಾಸ ರೈ, ರಝಾಕ್ ಹಾಜಿ, ಪದ್ಮನಾಭ ಶೆಟ್ಟಿ, ಗಫೂರ್ ಹಾಜಿ ಕಂಬಳಬೆಟ್ಟು , ವಿ ಕೆ ಅಬ್ದುಲ್ ಖಾದರ್ ಹಾಜಿ, ಅಬ್ದುಲ್ ಶುಕೂರ್ ಹಾಜಿ, ಅಬ್ದುಲ್ ರಹಮಾನ್, ಜಯಂತ ನಡುಬೈಲು ಭಾಗವಹಿಸಿದ್ದರು.
ಸಂಸ್ಥೆಯ ಪಾಲುದಾರರಾದ ಸಂಶುದ್ದೀನ್ ಮೊಯ್ದಿನ್, ಮಹಮ್ಮದ್ ಕಲಂದರ್ ಶಾಝ್ ಸ್ವಾಗತಿಸಿ , ನಿರೂಪಿಸಿದರು.
ಜಿಲ್ಲೆಯ ಪ್ರಮುಖ ನಿರ್ಮಾಣ ಸಂಸ್ಥೆಗಳಿಗೆ ಟೈಲ್ಸ್ , ಸ್ಯಾನಿಟರಿವೇರ್ಗಳನ್ನು ಪೂರೈಸುತ್ತಿರುವ ಪ್ರೆಸ್ಟೀಜ್ ಗ್ರೂಪ್ ನ ಒಟ್ಟು 5 ಸಂಸ್ಥೆಗಳು ಜಿಲ್ಲೆಯ ಹಲವೆಡೆ ಕಾರ್ಯನಿರ್ವಹಿಸುತ್ತಿದ್ದು , 2 ದೊಡ್ಡ ದಾಸ್ತಾನು ಕೇಂದ್ರವನ್ನು ಹೊಂದಿದ್ದು , 50 ಸಾವಿರಕ್ಕೂ ಹೆಚ್ಚು ಗ್ರಾಹಕ ಬಳಗವನ್ನು ಕೂಡ ಹೊಂದಿದೆ. ಮಳಿಗೆಯಲ್ಲಿ ಪ್ರಮುಖವಾಗಿ ಜಾಗ್ವಾರ್ , ಅರ್ಟೈಝ್ ,ಎಸ್ಕೋ ,ಆ್ಯಸ್ಟ್ರಲ್ ,ವೆಬೆರ್ ,ಕಾಜಾರಿಯ ,ಮೊಟ್ಟೊ ,ಮೆಟ್ರೋ , ಪಂಡ ,ಹಫ್ಲೆ ಮತ್ತು ಮೊನೊಲಿತ್ ಹಾಗೂ ಫ್ರಾಂಕಿ ಉತ್ತನ್ನಗಳು ಲಭ್ಯವಿದ್ದು , ಎಲ್ಲವೂ ಸ್ಪರ್ಧಾತ್ಮಕ ದರದಲ್ಲೇ ಗ್ರಾಹಕರ ಕೈ ಸೇರಲಿದೆ.
ವಾಲ್ ಟೈಲ್ಸ್ ,ಪ್ಲೋರ್ ಟೈಲ್ಸ್ ,ಬಾತ್ ರೂಂ ಟೈಲ್ಸ್ ,ಕಿಚನ್ ಟೈಲ್ಸ್ ,ಟೇಬಲ್ ಟಾಪ್ ಹಾಗೂ ಔಟ್ ಡೋರ್ ಟೈಲ್ಸ್ ಗಳೆಲ್ಲಾ ಹಾಗೂ ಹೆಸರಾಂತ ಜಾಗ್ವರ್ ಕಂಪನಿಯ ಉತ್ಪನ್ನವೆಲ್ಲಾ ವಿಶೇಷ ದರದಲ್ಲಿ ಲಭ್ಯವಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.





