ಪುತ್ತೂರು: ಅಡಿಕೆ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಗ್ರಾಮಾಂತರ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಅಡಿಕೆ ಕಳ್ಳರನ್ನು ಬಂಧಿಸಿದ್ದು ಕಾವು ಅಮ್ಚಿನಡ್ಕ ನಿವಾಸಿ ಗಳಾದ ಕಿರಣ್ ಕುಮಾರ್, ಸಂತೋಷ್ ಬಂಧಿತ ಆರೋಪಿಗಳಾಗಿದ್ದಾರೆ.
ಪುತ್ತೂರು ತಾಲೂಕು ಮಾಡ್ನೂರು ಗ್ರಾಮದ ಅಮ್ಮಿನಡ್ಕ ಎಂಬಲ್ಲಿರುವ ವಿಷ್ಣು ಕಲ್ಲುರಾಯ ರವರ ಮನೆಯಉಗ್ರಾಣದಲ್ಲಿ ಶೇಖರಿಸಿಟ್ಟಿದ್ದ 10 ಪ್ಲಾಸ್ಟಿಕ್ ಗೋಣಿ ಚೀಲದಲ್ಲಿ ತುಂಬಿಸಿದ್ದ ಸುಮಾರು 2 ಕ್ವಿಂಟಾಲ್ ಸುಲಿಯದ ಒಣ ಅಡಿಕೆಯನ್ನು ಮತ್ತು ಹುಲ್ಲು ತೆಗಿಯುವ ಮೇಷಿನ್ ಕಳವು ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ: 73/2023 ಕಲಂ: 454,457,380 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು.
ಆರೋಪಿಗಳನ್ನು ಬಂಧಿಸಿ ಸುಮಾರು ರೂ 51,000/- ಮೌಲ್ಯದ 1 ಕಿಂಟ್ವಾಲ್ 20 ಕೆಜಿ ಸುಲಿದ ಅಡಿಕೆ ಮತ್ತು ಸುಮಾರು ರೂ 5,000/-ಮೌಲ್ಯದ ಹುಲ್ಲು ತೆಗಿಯುವ ಮೇಷಿನ್ ಹಾಗೂ ಕಳವು ಮಾಡಲು ಉಪಯೋಗಿಸಿದ ಸುಮಾರು ಒಂದು ಲಕ್ಷ ಮೌಲ್ಯದ ಓಮ್ನಿ ಕಾರನ್ನು ವಶಪಡಿಸಿಕೊಂಡಿರುತ್ತಾರೆ.





