February 4, 2026

ಭೀಕರ ರಸ್ತೆ ಅಪಘಾತ: ಪೊಲೀಸ್‌ ಕಾನ್ ಸ್ಟೇಬಲ್‌ ಸೇರಿದಂತೆ 9 ಮಂದಿ ಮೃತ್ಯು

0
image_editor_output_image-1373307701-1689831843982.jpg

ಗುಜರಾತ್:‌ ಕಾರು ಹರಿದು ಪೊಲೀಸ್‌ ಕಾನ್ಸ್‌ ಟೇಬಲ್‌ ಸೇರಿದಂತೆ 9 ಮಂದಿ ಮೃತಪಟ್ಟಿರುವ ಭೀಕರ ಘಟನೆ ಗುರುವಾರ (ಜು.20 ರಂದು) ಅಹಮದಾಬಾದ್‌ನ ಇಸ್ಕಾನ್ ಸೇತುವೆ ಬಳಿ ನಡೆದಿದೆ.

ತಡರಾತ್ರಿ 1:30 ರ ಹೊತ್ತಿ ಈ ಘಟನೆ ನಡೆದಿದ್ದು, ಸರ್ಖೇಜ್-ಗಾಂಧಿನಗರ (ಎಸ್‌ಜಿ) ಹೆದ್ದಾರಿಯಲ್ಲಿನ ಇಸ್ಕಾನ್ ಸೇತುವೆ ಬಳಿ ಥಾರ್ ಮತ್ತು ಡಂಪರ್ ಟ್ರಕ್‌ ನಡುವೆ ಅಪಘಾತವೊಂದು ಸಂಭವಿಸಿದೆ.

ಈ ಅಪಘಾತದ ಭೀಕರತೆಯನ್ನು ನೋಡಲು ಹತ್ತಾರು ಮಂದಿ ಸೇರಿದ್ದಾರೆ. ಪೊಲೀಸರು ಕೂಡ ಘಟನಾ ಸ್ಥಳಕ್ಕೆ ತಲುಪಿದ್ದಾರೆ. ಆದರೆ ಇದೇ ವೇಳೆ ಮತ್ತೊಂದು ಭೀಕರ ಘಟನೆ ನಡೆದಿದೆ.

ವೇಗವಾಗಿ ಬಂದ ಜಾಗ್ವಾರ್‌ ಕಾರು ಅಪಘಾತದ ಸ್ಥಳದಲ್ಲಿ ನೆರದಿದ್ದ ಜನರ ಮೇಲೆ ಏಕಾಏಕಿ ಹರಿದಿದೆ. ಪರಿಣಾಮ 9 ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇಬ್ಬರು ಪೊಲೀಸ್‌ ಸಿಬ್ಬಂದಿಗಳು ಮೃತಪಟ್ಟಿದ್ದಾರೆ. ಕಾರು 160 km ವೇಗದಲ್ಲಿ ಬಂದು ಜನರ ಮೇಲೆ ಹರಿದಿದೆ ಎಂದು ವರದಿ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!