February 4, 2026

ಸುಳ್ಯ: ಗುಡ್ಡ ಕುಸಿದು ವಾಹನ ಸಂಚಾರಕ್ಕೆ ಅಡ್ಡಿ

0
image_editor_output_image1978662931-1689832818374.jpg

ಸುಳ್ಯ: ಕರಾವಳಿಯಲ್ಲಿ ಸುರಿಯುತ್ತಿರುವ ಮಳೆಗೆ ಮಣ್ಣು ನುಸುಳಿಕೊಂಡು ಕರ್ನಾಟಕ ಮತ್ತು ಕೇರಳ ಸಂಪರ್ಕಿಸುವ ಕಲ್ಲಪಳ್ಳಿ-ಪಾಣತ್ತೂರು ಅಂತರ್ ರಾಜ್ಯ ರಸ್ತೆಯ ಬಾಟೋಳಿ ಎಂಬಲ್ಲಿ ಗುಡ್ಡ ಕುಸಿದು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.

ಬಾಟೋಳಿ ಗಡಿ ಪ್ರದೇಶದಿಂದ ಸುಮಾರು 100ಮೀ ಮುಂದೆ ಈ ಘಟನೆ ಸಂಭವಿಸಿದೆ.

ಗುಡ್ಡ ಕುಸಿತದಿಂದ ಪಾಣತ್ತೂರು ರಸ್ತೆ ಸಂಚಾರ ಬಂದ್ ಆಗಿದೆ.

ರಾತ್ರಿ ಸುರಿದ ಮಳೆಯಿಂದಾಗಿ ಗುಡ್ಡ ಕುಸಿತ ಉಂಟಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಈ ಭಾಗದಲ್ಲಿ ಹಿಂದೆಯೂ ಗುಡ್ಡ ಕುಸಿತಗೊಂಡಿದ್ದು, ಸಂಚಾರ ಕಡಿತಗೊಂಡಿದೆ.

Leave a Reply

Your email address will not be published. Required fields are marked *

error: Content is protected !!