ಮುಲ್ಕಿ |ಮನೆಯ ಬಾಗಿಲು ಮುರಿದು ಕಳ್ಳತನ: ಆರೋಪಿಯ ಬಂಧನ
ಮಂಗಳೂರು: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜ. 15 ರಂದು ಮನೆಯೊಂದರ ಬಾಗಿಲು ಮುರಿದು ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿದ್ದ ಆರೋಪದ ಮೇಲೆ ಮತ್ತೋರ್ವ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬೊಂಡತಿಲ ಗ್ರಾಮದ ನಿವಾಸಿ ಮಹಮ್ಮದ್ ಷರೀಫ್ (40) ಬಂಧಿತ ಆರೋಪಿ.
ಮಂಗಳೂರು ತಾಳಿಪಾಡಿ ಗ್ರಾಮದ ಗುತ್ತಕಾಡು ಎಂಬಲ್ಲಿ ಐಕಳ ಹರೀಶ್ ಶೆಟ್ಟಿ ಎಂಬುವವರಿಗೆ ಸೇರಿದ ಚಂದ್ರಿಕಾ ಎಂಬುವರ ಮನೆಯ ಮುಂಬಾಗಿಲ ಬೀಗವನ್ನು 2023 ರ ಜ.15 ರಂದು ಸಂಜೆ 6.30 ರಿಂದ 2023ರ ಜ.16ರಂದು ಬೆಳಗ್ಗೆ 9 ಗಂಟೆಯ ಅವಧಿಯಲ್ಲಿ ಅಪರಿಚಿತ ದುಷ್ಕರ್ಮಿಗಳು ಒಡೆದು ಒಳ ನುಗ್ಗಿ ಚಿನ್ನಾಭರಣ ಹಾಗೂ ನಗದು ಹಣದೊಂದಿಗೆ ಚಿನ್ನಾಭರಣ ದೋಚಿದ್ದರು.
ಈ ಸಂಬಂಧ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.




