March 20, 2026

ದಂಗೆಕೋರರ ಎನ್‌ಕೌಂಟರ್‌ ಗೆ  ಗಡಿಭದ್ರತಾ ಪಡೆಯ ಯೋಧ ಮೃತ್ಯು

0
image_editor_output_image-1396017477-1686114044892.jpg

ಇಂಪಾಲ: ಮಣಿಪುರದ ಸೆರೌ ಪ್ರದೇಶದಲ್ಲಿ ಮಂಗಳವಾರ ಮುಂಜಾನೆ ಕುಕಿ ದಂಗೆಕೋರರೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಗಡಿ ಭದ್ರತಾ ಪಡೆ ಯೋಧರೊಬ್ಬರು ಹುತಾತ್ಮರಾಗಿದ್ದು, ಇಬ್ಬರು ಅಸ್ಸಾಂ ರೈಫಲ್ಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.

ಕಾಕ್ಚಿಂಗ್ ಜಿಲ್ಲೆಯ ಸುಗ್ನುವಿನ ಸೆರೌ ಪ್ರದೇಶದ ಶಾಲೆಯೊಂದರಲ್ಲಿ ದಂಗೆಕೋರರು ಮತ್ತು ಭದ್ರತಾ ಪಡೆಯ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಕಾನ್‌ಸ್ಟೇಬಲ್ ರಂಜಿತ್ ಯಾದವ್ ಎಂಬ ಯೋಧನಿಗೆ ಗುಂಡು ತಗುಲಿತ್ತು.

ತಕ್ಷಣ ಅವರನ್ನು ಕಾಕ್ಚಿಂಗ್ ಜೀವನ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಸ್ಪತ್ರೆಯಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!