August 12, 2026

ಪ್ರವಾಸಿ ಕೂಟ ವಿಟ್ಲ (ರಿ) ವತಿಯಿಂದ NEET–UG ಸಾಧಕ ಅಯಾನ್ ಯೂಸುಫ್‌ಗೆ ಸನ್ಮಾನ

0
IMG-20260812-WA0085

ವಿಟ್ಲ: ನೀಟ್–ಯುಜಿ ವಿದೇಶಿ ಅಭ್ಯರ್ಥಿಗಳ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಪಡೆದು ವಿಟ್ಲದ ಕೀರ್ತಿಯನ್ನು ಹೆಚ್ಚಿಸಿದ ಹೆಮ್ಮೆಯ ವಿದ್ಯಾರ್ಥಿ, ಸಮದ್ ಕೊಳ್ನಾಡು ಹಾಗೂ ನುಸೈಬಾ ದಂಪತಿಯ ಪುತ್ರ ಅಯಾನ್ ಯೂಸುಫ್ ಅವರನ್ನು ಪ್ರವಾಸಿ ಕೂಟ ವಿಟ್ಲ (ರಿ) ವತಿಯಿಂದ ವಿಟ್ಲ ಕಚೇರಿಯಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರವಾಸಿ ಕೂಟ ವಿಟ್ಲ (ರಿ) ಅಧ್ಯಕ್ಷ ಮೊಹಮ್ಮದ್ ಮಸೂದ್ ವಿಟ್ಲ, ಉಪಾಧ್ಯಕ್ಷ ಶಾಫೀ ಬಹರೈನ್, ಪ್ರಧಾನ ಕಾರ್ಯದರ್ಶಿ ತವಾಝ್ ವಿಟ್ಲ ಹಾಗೂ ಮಾಧ್ಯಮ ವಕ್ತಾರ ನವಾಝ್ ಕಡಂಬು ಉಪಸ್ಥಿತರಿದ್ದು, ಅಯಾನ್ ಯೂಸುಫ್ ಅವರಿಗೆ ಶುಭ ಹಾರೈಸಿದರು.

ಇದೇ ವೇಳೆ ಕುವೈತ್ ರಾಷ್ಟ್ರೀಯ ಸಮಿತಿ ಸದಸ್ಯ ಅಬ್ದುಲ್ ರಶೀದ್, ಅಬುಧಾಬಿ ರಾಷ್ಟ್ರೀಯ ಸಮಿತಿ ಸದಸ್ಯ ಯೂನೂಸ್, ಯುಎಇ ಸದಸ್ಯರಾದ ಶಮೀರ್, ಶಾಹಿದ್ ಹಾಗೂ ಅಲಿ ಕಂಬಳಬೆಟ್ಟು, ಬಹರೈನ್ ರಾಷ್ಟ್ರೀಯ ಸಮಿತಿ ಸದಸ್ಯರಾದ ರಫೀಕ್ ಹಾಗೂ ನಿಶಾರ್ ಸೇರಿದಂತೆ ಮಾಜಿ ಪ್ರವಾಸಿ ಅಬ್ದುಲ್ ಕಾದರ್ ಚಂದಳಿಕೆ ಕೂಡ ಉಪಸ್ಥಿತರಿದ್ದರು.

ಅಯಾನ್ ಯೂಸುಫ್ ಅವರ ಮುಂದಿನ ಶೈಕ್ಷಣಿಕ ಕ್ಷೇತ್ರದಲ್ಲಿ ಮತ್ತಷ್ಟು ಉನ್ನತ ಸಾಧನೆ ಮಾಡಲಿ ಎಂದು ಶುಭ ಹಾರೈಸಿದರು.

Leave a Reply

Your email address will not be published. Required fields are marked *

error: Content is protected !!