August 12, 2026

ಮುದರಂಗಡಿ ಗ್ರಾಪಂ ಮಾಜಿ ಅಧ್ಯಕ್ಷ ಡೇವಿಡ್ ಡಿಸೋಜ ಶೂಟೌಟ್ ಪ್ರಕರಣ: ಮತ್ತಿಬ್ಬರು ಆರೋಪಿಗಳ ಸೆರೆ

0
IMG-20260812-WA0047

ಉಡುಪಿ: ಮುದರಂಗಡಿ ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಗುತ್ತಿಗೆದಾರ ಡೇವಿಡ್ ಡಿಸೋಜ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಎರ್ಮಾಳ್ ತೆಂಕ ಪಂಚಾಯತ್ ಕಛೇರಿ ಬಳಿಯ ನಿವಾಸಿಗಳಾದ ಚಿರಾಗ್ ಪೂಜಾರಿ(26) ಹಾಗೂ ಮೊಹಮ್ಮದ್ ಇರ್ಷಾದ್(43) ಬಂಧಿತ ಆರೋಪಿಗಳು.

ಈ ಪ್ರಕರಣದಲ್ಲಿ ಈಗಾಗಲೇ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಸಿದಾಗ ಚಿರಾಗ್ ಪೂಜಾರಿ ಹಾಗೂ ಮೊಹಮ್ಮದ್ ಇರ್ಷಾದ್ ಎಂಬವರು ಕೃತ್ಯ ನಡೆಸಲು ಹಣ ವರ್ಗಾವಣೆ ಮಾಡಲು ಸಹಾಯ ಮಾಡಿರುವುದು ಕಂಡುಬಂದಿದೆ. ಅದರಂತೆ ಇವರಿಬ್ಬರನ್ನು ಆ.12ರಂದು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಐದಕ್ಕೇರಿದೆ.

Leave a Reply

Your email address will not be published. Required fields are marked *

You may have missed

error: Content is protected !!