ಮಹಿಳಾ ಹಾಸ್ಟೆಲ್‌ನಲ್ಲಿ ಯುವತಿಯ ಹತ್ಯೆ: ರೈಲ್ವೇ ಹಳಿಯಲ್ಲಿ ಆರೋಪಿಯ ಮೃತದೃಹ ಪತ್ತೆ
ಮುಂಬೈ: ಮಹಿಳಾ ಹಾಸ್ಟೆಲ್‌ನಲ್ಲಿ 18 ವರ್ಷದ ಯುವತಿಯನ್ನು ಹತ್ಯೆಗೈದ (Murder) ಬಳಿಕ ರೈಲ್ವೇ ಹಳಿಯಲ್ಲಿ ಆರೋಪಿಯ ಶವ ಪತ್ತೆಯಾದ ಘಟನೆ ದಕ್ಷಿಣ ಮುಂಬೈನ ಚರ್ಚ್ ಗೇಟ್ ಪ್ರದೇಶದಲ್ಲಿ ನಡೆದಿದೆ.
ಕೊಲೆಯಾದ ಯುವತಿ ಬಾಂದ್ರಾದ ಉಪನಗರದ ಸರ್ಕಾರಿ ಪಾಲಿಟೆಕ್ನಿಕ್‌ನ ವಿದ್ಯಾರ್ಥಿನಿಯಾಗಿದ್ದು, ಮೆರೈನ್ ಡ್ರೈವ್‌ನ ಮಹಿಳಾ ಹಾಸ್ಟೆಲ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಳು.
ಆಕೆಯ ಕೋಣೆಗೆ ಹೊರಗಿನಿಂದ ಬೀಗ ಹಾಕಿದ್ದು, ಆಕೆ ಹೊರಬಾರದ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಬೀಗ ಒಡೆದು ಕೋಣೆಯೊಳಗೆ ನುಗ್ಗಿದಾಗ ದುಪ್ಪಟ್ಟ ಕುತ್ತಿಗೆಗೆ ಬಿಗಿದ ಸ್ಥಿತಿಯಲ್ಲಿ ಯುವತಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.




