August 13, 2026

ಯುವತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ಪ್ರಿಯಕರ

0
image_editor_output_image-128445342-1686114406379.jpg

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರಿಯಕರನೇ ತನ್ನ ಪ್ರಿಯತಮೆ ಯನ್ನು ಕೊಲೆ ಮಾಡಿ ಬಳಿಕ ಎಸ್ಕೇಪ್ ಆದ ಘಟನೆ ನಡೆದಿದೆ.

ಬೆಂಗಳೂರಿನ ಜೀವನ್ ಭಿಮಾ ನಗರ ದ ಕೋಡಿಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಹೈದರಾಬಾದ್ ಮೂಲದ ಆಕಾಂಕ್ಷಾ ಮೃತ ಯುವತಿಯಾಗಿದ್ದು, ಈಕೆಯನ್ನು ದೆಹಲಿ ಮೂಲದ ಅರ್ಪಿತ್ ಕೊಲೆ ಮಾಡಿದ್ದಾನೆ.

ಈ ಹಿಂದೆ ಆಕಾಂಕ್ಷಾ ಹಾಗೂ ಅರ್ಪಿತ್ ಇಬ್ಬರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಕೆಲಸ ಬದಲಾವಣೆ ಮಾಡಿ ಬೇರೆ ಬೇರೆ ಕಡೆ ಕೆಲಸಮಾಡುತ್ತಿದ್ದರು.

ಯುವತಿ ಬಿಕಾಂ ವ್ಯಾಸಂಗ ಮಾಡಿ ಖಾಸಗಿ ಕಂಪನಿಯೊಂದರಲ್ಲಿ ಸೇಲ್ಸ್ ನಲ್ಲಿ ಕೆಲಸ ಮಾಡುತ್ತಿದ್ದಳು.

ಇಬ್ಬರು ಒಟ್ಟಿಗೆ ವಾಸ ಮಾಡುತ್ತಿದ್ದರು. ಇತ್ತೀಚೆಗೆ ಇವರಿಬ್ಬರ ಮಧ್ಯೆ ಜಗಳ ನಡೆದಿದೆ. ಈ ವೇಳೆ ಇಬ್ಬರು ಬೇರೆಯಾಗಬೇಕು ಎಂದು ಮಾತಾಡಿಕೊಂಡಿದ್ದರು.

ಇದಾದ ಬಳಿಕ ಸೋಮವಾರ ಇಬ್ಬರು ಮನೆಯಲ್ಲಿ ಇರುವಾಗ ಗಲಾಟೆ ಶುರುವಾಗಿದೆ. ಬಳಿಕ ಯುವತಿಯನ್ನು ಅರ್ಪಿತ್ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.

Leave a Reply

Your email address will not be published. Required fields are marked *

You may have missed

error: Content is protected !!