March 16, 2026

3ನೇ ಪತ್ನಿಗಾಗಿ ಮಗನನ್ನೇ ಕತ್ತು ಹಿಸುಕಿ‌ ಕೊಂದ ತಂದೆ

0
image_editor_output_image-514386517-1684312488983.jpg

ಭೋಪಾಲ್: ವ್ಯಕ್ತಿಯೊಬ್ಬ ತನ್ನ 7 ವರ್ಷದ ಮಗನನ್ನೇ ಕತ್ತು ಹಿಸುಕಿ ಕೊಲೆಗೈದ ಘಟನೆ ಮಧ್ಯಪ್ರದೇಶ ದ ಇಂದೋರ್ ನಲ್ಲಿ ನಡೆದಿದೆ.

ಪ್ರತೀಕ್ ಕೊಲೆಯಾದ ದುರ್ದೈವಿಯಾಗಿದ್ದು, ಈತ 3ನೇ ಕ್ಲಾಸಿನಲ್ಲಿ ಓದುತ್ತಿದ್ದ. ಪ್ರತೀಕ್ ಪ್ರತಿನಿತ್ಯ ತನ್ನ ಅಜ್ಜಿ ಜೊತೆನೇ ಮಲಗುತ್ತಿದ್ದ.

ಆದರೆ ಭಾನುವಾರ ಆರೋಪಿ ತಂದೆ ಶಶಿಪಾಲ್, ಕೂಲರ್ ಹಾಕಿದ್ದೀನಿ. ಇವತ್ತು ತನ್ನ ಜೊತೆ ಮಲಗುವಂತೆ ಒತ್ತಾಯಿಸಿದ್ದ. ಕೂಲರ್ ಇದೆ ಅಂದತಕ್ಷಣ ಬಾಲಕ, ಅಜ್ಜಿ ಜೊತೆ ತಾನು ಇಂದು ತಂದೆ ಜೊತೆ ಮಲಗುವುದಾಗಿ ಹೇಳಿದ್ದಾನೆ. ಅಂತೆಯೇ ಪ್ರತೀಕ್ ತಂದೆ ಜೊತೆ ಕೋಣೆಯಲ್ಲಿ ಮಲಗಿದ್ದನು.

ಇತ್ತ ಮಗ ನಿದ್ದೆಗೆ ಜಾರುತ್ತಿದ್ದಂತೆಯೇ ಶಶಿಪಾಲ್ ಟಿವಿ ವಾಲ್ಯೂಮ್ ಜಾಸ್ತಿ ಮಾಡಿದ್ದಾನೆ. ನಂತರ ಮಗನನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಅಲ್ಲದೆ ಇದೇ ವೇಳೆ ಪತ್ನಿಗೆ ವೀಡಿಯೋ ಕಾಲ್ ಮಾಡಲು ಪ್ರಯತ್ನಿಸಿದ್ದಾನೆ. ಆದರೆ ಆಕೆ ಆ ಸಮಯದಲ್ಲಿ ಕಾಲ್ ಪಿಕ್ ಮಾಡಿರಲಿಲ್ಲ.

ಮಗನನ್ನು ಕತ್ತು ಹಿಸುಕಿ ಕೊಲೆ ಮಾಡಿದ ದೃಶ್ಯವನ್ನು ಕೂಡ ಸೆರೆಹಿಡಿದು ಮೂರನೇ ಪತ್ನಿ ಪಾಯಲ್ ಗೆ ವಾಟ್ಸಪ್ ಮೂಲಕ ಕಳುಹಿಸಿದ್ದಾನೆ. ಆದರೆ ಅವಳು ಅದಾಗಲೇ ಈತನ ನಂಬರ್ ಬ್ಲಾಕ್ ಮಾಡಿದ್ದರಿಂದ ವೀಡಿಯೋ ನೋಡಿರಲಿಲ್ಲ. ನಂತರ ಈತ ಅಲ್ಲಿಂದ ಪರಾರಿಯಾಗಿದ್ದಾನೆ.

Leave a Reply

Your email address will not be published. Required fields are marked *

error: Content is protected !!