March 16, 2026

ಆ್ಯಂಬುಲೆನ್ಸ್ ನೀಡದ ಸರಕಾರಿ ಆಸ್ಪತ್ರೆ: ಮಗಳ ಮೃತದೇಹವನ್ನು ಬೈಕ್ ನಲ್ಲೆ ಸಾಗಿಸಿದ ತಂದೆ

0
image_editor_output_image-6818204-1684312295009.jpg

ಭೋಪಾಲ್: ವ್ಯಕ್ತಿಯೊಬ್ಬ ತನ್ನ 13 ವರ್ಷದ ಮಗಳ ಮೃತದೇಹವನ್ನು ಬೈಕಿನಲ್ಲೇ ಸಾಗಿಸಿದ ಘಟನೆಯೊಂದು ಮಧ್ಯಪ್ರದೇಶದ ಶಹದೋಲ್ ನಲ್ಲಿ ನಡೆದಿದೆ.

ವ್ಯಕ್ತಿಯನ್ನು ಲಕ್ಷ್ಮಣ್ ಸಿಂಗ್ ಎಂದು ಗುರುತಿಸಲಾಗಿದ್ದು, ಇವರು ಕೋಟಾ ಗ್ರಾಮದವರು. ಸಿಂಗ್ ಮಗಳು ಮಾಧುರಿ ಅನಾರೋಗ್ಯದಿಂದ ಸೋಮವಾರ ರಾತ್ರಿ ಮೃತಪಟ್ಟಿದ್ದಾಳೆ. ಮಗಳು ಸಾವನ್ನಪ್ಪುತ್ತಿದ್ದಂತೆಯೇ ಸಿಂಗ್ ಸರ್ಕಾರಿ ಆಸ್ಪತ್ರೆಯ ಅಧಿಕಾರಿಗಳಲ್ಲಿ ಅಂಬುಲೆನ್ಸ್ ವ್ಯವಸ್ಥೆ ಮಾಡುವಂತೆ ಕೇಳಿಕೊಂಡಿದ್ದಾರೆ.

ಈ ವೇಳೆ ಅಧಿಕಾರಿಗಳು 15 ಕಿ.ಮಿ ಒಳಗಡೆ ಮಾತ್ರ ಅಂಬುಲೆನ್ಸ್ ಕೊಡುವುದಾಗಿ ತಿಳಿಸಿದ್ದಾರೆ. ಅಲ್ಲದೆ 15 ಕಿ.ಮೀ ಗಿಂತಲೂ ದೂರ ಕ್ರಮಿಸಬೇಕಾದರೆ ಹೆಚ್ಚಿನ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಮಗಳ ಶವವನ್ನು ಬೈಕಿನಲ್ಲಿಯೇ ಸಾಗಿಸುವ ಬಗ್ಗೆ ತೀರ್ಮಾನ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!