March 16, 2026

ಪಡುಬಿದ್ರೆ: ಆಟೋ ರಿಕ್ಷಾ, ಲಾರಿಗಳಿಗೆ ಢಿಕ್ಕಿ ಹೊಡೆದ ಬಸ್

0
image_editor_output_image2066097555-1684302366202.jpg

ಪಡುಬಿದ್ರೆ: ಬಸ್ಸು ಹಾಗೂ ಲಾರಿಗಳ ನಡುವೆ ಭೀಕರ ಅಪಘಾತ ನಡೆದಿದೆ. ಜೊತೆಗೆ ನಿಂತಿದ್ದ ಆಟೋ ರಿಕ್ಷಾಕ್ಕೂ ಬಸ್ಸು ಡಿಕ್ಕಿ ಹೊಡೆದಿದೆ. ಈ ಘಟನೆ ಉಡುಪಿಯ ಸಮೀಪದ ಪಡುಬಿದ್ರೆ ಜಂಕ್ಷನ್ ನಲ್ಲಿ ಮಂಗಳವಾರ ಸಂಜೆ ನಡೆದಿದೆ.

ಕಾರ್ಕಳ ಕಡೆಗೆ ಹೋಗುತ್ತಿದ್ದ ಬಸ್ಸು ಮೊದಲಿಗೆ ಹೆದ್ದಾರಿಯಲ್ಲಿ ಉಡುಪಿ ಕಡೆಯಿಂದ ಬರುತ್ತಿದ್ದ ಲಾರಿಗೆ ಢಿಕ್ಕಿಯಾಗಿತ್ತು.

ಬಳಿಕ ಕಾರ್ಕಳ ರಸ್ತೆ ಬದಿ ಇರಿಸಿದ್ದ ಟ್ರಾಫಿಕ್ ಬೂತ್‍ ಗೆ ಬಡಿದ ಬಸ್ ಮುಂದೆ ಸಾಗಿ ಆಟೋ ರಿಕ್ಷಾವೊಂದಕ್ಕೂ ಢಿಕ್ಕಿಯಾಗಿದೆ.

ರಿಕ್ಷಾ ಚಾಲಕ ಅಪಘಾತದ ಮುನ್ಸೂಚನೆಯನ್ನರಿತು ರಿಕ್ಷಾ ಬಿಟ್ಟು ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!