March 16, 2026

ಲಾರಿ–ಆಟೋ ರಿಕ್ಷಾ ನಡುವಿನ ಭೀಕರ ಅಪಘಾತ: 6‌ ಮಂದಿ ಮೃತ್ಯು

0

andrapradesh

image_editor_output_image-123431976-1684314717810.jpg

ಆಂಧ್ರ ಪ್ರದೇಶ: ಲಾರಿ – ಆಟೋ ರಿಕ್ಷಾ ನಡುವಿನ ಭೀಕರ ಅಪಘಾತದಲ್ಲಿ 6 ಮಂದಿ ಮೃತಪಟ್ಟಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಪಲ್ನಾಡು ಜಿಲ್ಲೆಯಲ್ಲಿ ಬುಧವಾರ(ಮೇ.17 ರಂದು) ಮುಂಜಾನೆ ನಡೆದಿದೆ.

ಗುಡೂರು ಕಡೆಯಿಂದ ಬರುತ್ತಿದ್ದ ಲಾರಿ ತೆಲಂಗಾಣದ ನಲ್ಗೊಂಡ ಕಡೆಗೆ ಬರುತ್ತಿದ್ದ ಆಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ. ಪರಿಣಾಮ ರಿಕ್ಷಾದಲ್ಲಿದ್ದ 6 ಮಹಿಳಾ ಕಾರ್ಮಿಕರು ಮೃತಪಟ್ಟಿದ್ದು, ಇನ್ನು 6 ಮಂದಿ ಗಾಯಗೊಂಡಿದ್ದಾರೆ. ಅಪಘಾತ ಮಾಡಿ ಲಾರಿ ಸ್ಥಳದಿಂದ ಪರಾರಿಯಾಗಿದೆ ಎಂದು ವರದಿ ತಿಳಿಸಿದೆ.

ಮೃತ ಮಹಿಳಾ ಕಾರ್ಮಿಕರು ಮೆಣಸಿನಕಾಯಿ ಕೊಯ್ಲು ಕೆಲಸಕ್ಕಾಗಿ ಪಲ್ನಾಡು ಜಿಲ್ಲೆಯ ಪುಲಿಪಾಡು ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.

ಸದ್ಯ ಪರಾರಿಯಾದ ಲಾರಿಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ. ಗಾಯಾಳುಗಳನ್ನು ಸ್ಥಳೀಯರ ಸಹಕಾರದಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!