February 3, 2026

ಖಾಸಗಿ ಶಾಲೆಯಲ್ಲಿ ಯುವತಿಯಿಂದ ಗುಂಡಿನ ದಾಳಿ: , ಮೂವರು ವಿದ್ಯಾರ್ಥಿಗಳು ಸೇರಿ 6 ಮಂದಿ ಮೃತ್ಯು

0
image_editor_output_image-597795699-1679959089284.jpg

ಅಮೆರಿಕ: ಇಲ್ಲಿನ ಖಾಸಗಿ ಶಾಲೆಯೊಂದರಲ್ಲಿ 28 ವರ್ಷದ ಯುವತಿಯೊಬ್ಬಳು ಗುಂಡಿನ ದಾಳಿ ನಡೆಸಿದ್ದು, ಮೂವರು ವಿದ್ಯಾರ್ಥಿಗಳು ಹಾಗೂ ಮೂವರು ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಸೋಮವಾರ ಹೇಳಿದ್ದಾರೆ.

ದಾಳಿ ನಡೆಸಿರುವ ಯುವತಿಯನ್ನು ಪೊಲೀಸರು ಗುಂಡಿಟ್ಟು ಸಾಯಿಸಿದ್ದಾರೆ ಎಂದೂ ವಿವರಿಸಿದ್ದಾರೆ. ಯುವತಿ ಈ ಕೃತ್ಯ ಎಸಗಿರುವುದಕ್ಕೆ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಎರಡು ರೈಫಲ್‌ ಹಾಗೂ ಒಂದು ಪಿಸ್ತೂಲಿನೊಂದಿಗೆ ಬಂದ ಯುವತಿಯು ಗುಂಡಿನ ದಾಳಿ ನಡೆಸಿದ್ದಾಳೆ. ಈ ಶಾಲೆಯಲ್ಲಿ ನರ್ಸರಿಯಿಂದ ಆರನೇ ತರಗತಿ ವರೆಗಿನ ವಿದ್ಯಾರ್ಥಿಗಳು ಕಲಿಯುತ್ತಿದ್ದರು ಎಂದೂ ತಿಳಿಸಿದ್ದಾರೆ.

ಶಾಲೆಯನ್ನು ಸುತ್ತುವರಿದ ಶಸ್ತ್ರಧಾರಿ ಪೊಲೀಸರು ಉಳಿದ ಮಕ್ಕಳನ್ನು ಸುರಕ್ಷಿತವಾಗಿ ಹೊರಗೆ ಕರೆತಂದಿದ್ದಾರೆ ಎಂದೂ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!