September 2, 2026

ಶಾಲೆಯಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ: ಶಿಕ್ಷಕ ಅಮಾನತು

0
image_editor_output_image291168791-1679957256332.jpg

ಮಧುಗಿರಿ; ಶಾಲೆಯಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಕಾಮುಕ ಶಿಕ್ಷಕ ಮಂಜುನಾಥ್ ಹಾಗೂ ಕರ್ತವ್ಯ ಲೋಪದ ಆಧಾರದ ಮೇಲೆ ಮುಖ್ಯ ಶಿಕ್ಷಕ ನಟರಾಜ್ ಇಬ್ಬರನ್ನೂ ಅಮಾನತು ಮಾಡಲಾಗಿದೆ ಎಂದು ಬಿಇಓ ತಿಮ್ಮರಾಜು ತಿಳಿಸಿದ್ದಾರೆ.

ತಾಲೂಕಿನ ದೊಡ್ಡೇರಿ ಹೋಬಳಿಯ ಬೋರನಗುಂಟೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಾಮುಕ ಶಿಕ್ಷಕ ಮಂಜುನಾಥ್ ಹಾಗೂ ಮುಖ್ಯ ಶಿಕ್ಷಕ ನಟರಾಜ್ ಅಮಾನತ್ತಾಗಿ ಪೊಲೀಸರ ಅತಿಥಿಯಾಗಿದ್ದಾರೆ.

ಶಿಕ್ಷಕ ಮಂಜುನಾಥ್ ಶಾಲೆಯಲ್ಲಿ 5 ನೇ ತರಗತಿಯಲ್ಲಿ ಅಭ್ಯಾಸ ಮಾಡುವ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಬಗ್ಗೆ ದೂರು ಬಂದಿದೆ. ಶಾಲೆಯ ಬಳಿ ಗ್ರಾಮಸ್ಥರು, ಪೋಷಕರು ಜಮಾಯಿಸಿ ಶಿಕ್ಷಕರನ್ನು ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!