September 24, 2026

ಬೆಳ್ತಂಗಡಿ: ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವಕನ ಮೃತದೇಹ ಪಲ್ಗುಣಿ ನದಿಯಲ್ಲಿ ಪತ್ತೆ

0
image_editor_output_image-382789886-1784002960908

ಬೆಳ್ತಂಗಡಿ: ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ
ಯುವಕನ ಮೃತದೇಹ ಹೊಸಂಗಡಿಯ ಪೇರಿ ಸಮೀಪ ಪಲ್ಗುಣಿ ನದಿಯಲ್ಲಿ ಪತ್ತೆಯಾಗಿದೆ.

ಹೊಸಂಗಡಿಯ ಪೇರಿ ನಿವಾಸಿ ಕಿಶೋ‌ರ್ (31) ಎಂಬಾತನೇ ಮೃತ ಯುವಕನಾಗಿದ್ದಾನೆ.

 

ಜು.10 ರಂದು ಮನೆಯಿಂದ ಹೊರಗೆ ಹೋದ ಕಿಶೋರ್ ಮನೆಗೆ ಹಿಂತಿರುಗದೆ ನಿಗೂಢವಾಗಿ ನಾಪತ್ತೆಯಾಗಿದ್ದರು. ಈ ಬಗ್ಗೆ ಜು. 11 ರಂದು ವೇಣೂರು ಪೊಲೀಸರಿಗೆ ದೂರು ನೀಡಲಾಗಿತ್ತು. ಮನೆಮಂದಿ ಹಾಗೂ ಊರಿನವರು ಮೂರು ದಿನಗಳಿಂದ ನಿರಂತರ ಹುಡುಕಾಟ ನಡೆಸಿದ್ದರು ಯಾವುದೇ ಮಾಹಿತಿ ಲಭ್ಯವಾಗುರಲಿಲ್ಲ.

ಸೋಮವಾರ ಅಗ್ನಿಶಾಮಕ ದಳ, ಪೊಲೀಸರು ಹಾಗೂ ಊರಿನವರು ಪಲ್ಗುಣಿ ನದಿಯಲ್ಲಿ ಬೋಟ್ ಸಹಾಯದಲ್ಲಿ ಹುಡುಕಾಡಿದ್ದು, ನದಿನೀರಿನ ಪೊದೆಯ ಅಡಿಯಲ್ಲಿ ಮೃತದೇಹ ಪತ್ತೆಯಾಗಿದೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಲಾಗಿದೆ. ಕಿಶೋರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಅಥವಾ ಆಕಸ್ಮಿಕವಾಗಿ ಕಾಲುಜಾರಿ ನದಿ ನೀರಿಗೆ ಬಿದ್ದಿದ್ದಾರೋ ಎಂಬ ಖಚಿತ ಮಾಹಿತಿ ಲಭ್ಯವಾಗಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!