March 11, 2026

ಮಲಯಾಳಂನ ಹಿರಿಯ ನಟ ಮತ್ತು ಮಾಜಿ ಸಂಸದ ಇನೋಸೆಂಟ್ ನಿಧನ

0
innocent-actor.jpg

ಕೊಚ್ಚಿ: ಮಲಯಾಳಂನ ಹಿರಿಯ ನಟ ಮತ್ತು ಮಾಜಿ ಸಂಸದ ಇನೋಸೆಂಟ್ ಭಾನುವಾರ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.

ಇನೋಸೆಂಟ್ ರನ್ನು ಮಾರ್ಚ್ 3 ರಂದು ಉಸಿರಾಟದ ತೊಂದರೆ ಮತ್ತು ಅಸ್ವಸ್ಥತೆಯಿಂದ ಬಳಲುತ್ತಿದ್ದ ಅವರನ್ನು ಕೊಚ್ಚಿಯ VPS ಲೇಕ್‌ಶೋರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇನ್ನೋಸೆಂಟ್ 1972 ರಲ್ಲಿ ನೃತ್ಯಶಾಲೆ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. ಐದು ದಶಕಗಳ ಕಾಲದ ವೃತ್ತಿಜೀವನದಲ್ಲಿ, ಅವರು ಅಕ್ಕರೆ ನಿನ್ನೋರು ಮಾರನ್, ಉಣ್ಣಿಕಲೆ ಒರು ಕಧ ಪಾರಾಯಮ್, ನಾಡೋಡಿಕ್ಕಟ್ಟು, ಮುಕುಂತೇಟ್ಟ ಸುಮಿತ್ರಾ ವಿಲಿಕ್ಕುನ್ನು, ವಡಕ್ಕುನೋಕ್ಕಿಯಂತ್ರಂ, ರಾಮ್‌ಜಿ ರಾವ್ ಸ್ಪೀಕಿಂಗ್, ಸೇರಿದಂತೆ 750 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (ಅಮ್ಮ) ಅಧ್ಯಕ್ಷರಾಗಿ 15 ವರ್ಷಗಳ ಕಾಲ ಸೇವೆ ಸಲ್ಲಿಸಿದರು.

ಕೆಲವು ವರ್ಷಗಳ ಹಿಂದೆ, ಇನ್ನೋಸೆಂಟ್‌ಗೆ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಆದಾಗ್ಯೂ, 2015 ರಲ್ಲಿ, ನಟ ತಾನು ಕ್ಯಾನ್ಸರ್ ಮುಕ್ತನಾಗಿದ್ದೇನೆ ಎಂದು ಘೋಷಿಸಿದರು. ಏಪ್ರಿಲ್ 28 ರಂದು ತೆರೆಗೆ ಬರಲಿರುವ ಪಾಚುವುಮ್ ಅಲ್ಭುತವಿಳಕ್ಕುಂ ಅವರ ಅಂತಿಮ ತೆರೆಗೆ ಬರಲಿರುವ ಸಿನಿಮಾ ಆಗಿದೆ. ಇನ್ನೋಸೆಂಟ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!