February 1, 2026

ಮಂಗಳೂರು: 8 ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಳ್ಳಲಾದ 11 ಕೆಜಿ ಗಾಂಜಾ ಸಹಿತ ಮಾದಕ ವಸ್ತು ನಾಶ

0
pro.webp

ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 8 ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಳ್ಳಲಾದ ಗಾಂಜಾ ಸಹಿತ ಮಾದಕ ವಸ್ತುವನ್ನು ಪೊಲೀಸ್ ಅಧಿಕಾರಿಗಳು ನಾಶ ಪಡಿಸಿದ್ದಾರೆ.

ಮಾದಕ ವಸ್ತುಗಳಾದ ಗಾಂಜಾ ಒಟ್ಟು 11 ಕೆಜಿ 194 ಗ್ರಾಂ ಮತ್ತು ಎಂಡಿಎಂಎ 0.014 ಗ್ರಾಂ ಅನ್ನು ನ್ಯಾಯಾಲಯದ ಅನುಮತಿ ಪಡೆದುಕೊಂಡು ಮುಲ್ಕಿಯಲ್ಲಿ ನಾಶಪಡಿಸಲಾಯಿತು.

ಪೊಲೀಸ್ ಅಧಿಕಾರಿಗಳು ಈ ವೇಳೆ ಹಾಜರಿದ್ದು, ನಾಶ ಪ್ರಕ್ರಿಯೆ ನಡೆಸಿದರು.

ಇನ್ನು ಈ ಪ್ರಕರಣಗಳಿಗೆ
ಸಂಬಂಧಿಸಿ 10 ಮಂದಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!