ಬಾಕ್ರಬೈಲು ಮಲಾರ್ ಬ್ರಹ್ಮಸ್ಥಾನ ಶ್ರೀ ಮಲರಾಯ, ಜುಮಾದಿ ಬಂಟ, ಪಿಲಿಚಾಮುಂಡಿ ದೈವಗಳ ಶ್ರೀ ಕ್ಷೇತ್ರ ಕಾಲಾವಧಿ ಜಾತ್ರಾ ಮಹೋತ್ಸವ
ಬಾಕ್ರಬೈಲು: ರಾಜಕೀಯ ಏನೇ ಇದ್ದರೂ ಜಾತ್ರೆ, ದೈವಾರಾಧನೆಗೆ ಕೊರತೆಯಾಗದ ಬೆರ್ಮೆರ ಸಾನ ಬಾಕ್ರಬೈಲ್ ಬ್ರಹ್ಮಸ್ಥಾನ, ಹಿರಿಯರು ಆರಾಧಿಸಿಕೊಂಡು ಬಂದ ಸಾನದ ದೈವದ ಅಪ್ಪಣೆ ಪಡೆದುಕೊಂಡು ಮುಂಬೈನಲ್ಲಿ ಸ್ಥಾಪಿಸಿದ ಉದ್ಯಮ ಇಂದು ಯಶಸ್ವಿಯನ್ನು ಸಾಧಿಸಲು ದೈವ ಅನುಗ್ರಹವೇ ಕಾರಣ ಎಂದು ಮಲಾರು ಬ್ರಹ್ಮಸ್ಥಾನದ ಡೆವಲಂಪ್ ಮೆಂಟ್ ಟ್ರಸ್ಟ್ ಅಧ್ಯಕ್ಷರು ಹಾಗೂ ಹೇರಂಭಾ ಇಂಡಸ್ಟ್ರೀಸ್ ಮಾಲಕರಾದ ಸದಾಶಿವ ಶೆಟ್ಟಿ ಕೂಳೂರು ಕನ್ಯಾನ ಅಭಿಪ್ರಾಯಪಟ್ಟರು.

ಬಾಕ್ರಬೈಲು ಮಲಾರ್ ಬ್ರಹ್ಮಸ್ಥಾನ ಶ್ರೀ ಮಲರಾಯ, ಜುಮಾದಿ ಬಂಟ, ಪಿಲಿಚಾಮುಂಡಿ ದೈವಗಳ ಶ್ರೀ ಕ್ಷೇತ್ರ ಕಾಲಾವಧಿ ಜಾತ್ರಾ ಮಹೋತ್ಸವದ ಅಂಗವಾಗಿ ಜರಗಿದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಒಗ್ಗಟ್ಟಿನ ಜೊತೆಗೆ ಆರಾಧನೆ ಮುಂದುವರಿಯಬೇಕು. ಭಾರತ ದೇಶದಾದ್ಯಂತ ತಿರುಗಿ ನೋಡಿಬಂದವ, ತುಳುನಾಡಿನ ಆರಾಧನಾ ಕ್ರಮ ಭಿನ್ನವಾದುದು. ಸೌಹಾರ್ದತೆಯಿಂದ ತೊಡಗಿಕೊಂಡು ದೈವಸ್ಥಾನದ ಅಭಿವೃದ್ಧಿಯ ಜೊತೆಗೆ ಮೂಲಭೂತ ಸೌಕರ್ಯಗಳಿಗೂ ಶ್ರಮಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಬಿ.ರಮಾನಾಥ ರೈ ಬೆಳ್ಳಿಪ್ಪಾಡಿಗುತ್ತು ಮಾತನಾಡಿ ತುಳುನಾಡು ಭಾಗದಲ್ಲಿ ಕಟ್ಟುಕಟ್ಟಳೆ ಪ್ರಕಾರ ನಡೆಯುವ ದೈವ ಆರಾಧನೆಗೆ ವಿಶೇಷ ಮಹತ್ವವಿದೆ. ಕೇರಳ ಗಡಿಪ್ರದೇಶ ಸೇರಿದಂತೆ ತುಳುನಾಡಿನಲ್ಲಿರುವ ಆರಾಧನಾ ಕ್ರಮ, ವೈದಿಕ ವಿಧಿವಿಧಾನ ದೇಶದ ಎಲ್ಲಿಯೂ ಕಾಣಸಿಗುವುದಿಲ್ಲ. ಅರಣ್ಯ ಸಚಿವನಾಗಲು ಯೋಗ ದೊರೆತಾಗ ಕೊಡಿಮರವನ್ನು ದೈವಸ್ಥಾನಗಳಿಗೆ ನೀಡುವ ಭಾಗ್ಯ ದೊರೆಯಿತು. ಗುತ್ತು ಬರಿಕೆಯವರು ಜೊತೆಗೆ ಊರಿನ ಸಮಸ್ತರು ಸೇರಿಕೊಂಡು ದೈವಾರಾಧನೆಯಲ್ಲಿ ಪಾಲ್ಗೊಳ್ಳುವುದು ಸದ್ಯದ ವಾತಾವರಣ ಆರಾಧನೆಗಳಿಗೆ ಬಲ ಬಂದಿದೆ.
ಹಿಂದೆ ಭೂಮಿಯ ಒಡೆತನ ಕೆಲವರಿಗೇ ಮಾತ್ರವಿತ್ತು, ಸರಕಾರದ ಕಾನೂನು ಅನುಷ್ಠಾನಗೊಂಡ ಬಹಳಷ್ಟು ಮಂದಿ ಭೂ ಒಡೆಯರಾದರು.ಕಟ್ಟು ಕಟ್ಟಾಳೆಗೆ ಚ್ಯುತಿ ಬಾರದಂತೆ ಆಚರಣೆಗಳು ಮುಂದುವರಿಯಲಿ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೇರಳ ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಶ್ರೀಕಾಂತ್ ಮಾತನಾಡಿ ತುಳುನಾಡಿನ ಗತಕಾಲದ ವೈಭವ ಇಡೀ ಜಗತ್ತಿಗೆ ತಿಳಿಯುವ ಕಾಲ ಬಂದಿದೆ. ಯೋಗ ,ಪ್ರಾಣಾಯಾಮದ ತಪ್ಪು ಕಲ್ಪನೆಗಳು ಹೊರಹೋಗಿ, ವಿಶ್ವವೇ ಯೋಗವನ್ನು ಒಪ್ಪಿಕೊಂಡಿದೆ. ತುಳುವಿನದ್ದಾದಂತಹ ಧರ್ಮ ದೈವಗಳ ಆರಾಧನೆ ಕಾಂತಾರ ಸಿನಿಮಾದ ಮೂಲಕ ಇಡೀ ವಿಶ್ವ ತಿಳಿಯುವಂತಾಗಿದೆ. ಸಿನಿಮಾ ಮಾತ್ರವಲ್ಲ ತುಳು ಸಂಸ್ಕೃತಿಯ ಗೌರವವನ್ನು ಹೆಚ್ಚಿಸಿದೆ. ತಿರುವನಂತಪುರದಲ್ಲಿ ಪೊಂಗಾಲ ಹಾಕುವ ಲಕ್ಷಾಂತರ ಭಕ್ತಾಧಿಗಳ ನಡುವೆಯೂ ತುಳು ಸಂಸ್ಕೃತಿ ಮೇಳೈಸಿದೆ. ಆರಾಧನೆಯ ಮಾಹಿತಿ ಪಡೆದುಕೊಂಡು ಆರಾಧಿಸುವುದು ಸೂಕ್ತ ಎಂದರು.
ದೇವಸ್ವಂ ಬೋಡ್೯ ಏರಿಯಾ ಕಮಿಟಿ ಸದಸ್ಯ ಶಂಕರ್ ರೈ ಮಾಸ್ಟರ್, ಹೇರಂಭ ಇಂಡಸ್ಟ್ರೀಸ್ ಮ್ಯಾನೇಜಿಂಗ್ ಡೈರೆಕ್ಟರ್ ರಘುರಾಮ್ ಶೆಟ್ಟಿ, ವರ್ಕಾಡಿ ಗ್ರಾ.ಪಂ ಸದಸ್ಯೆ ಭಾರತಿ ಶೆಟ್ಟಿ ನಡಕ, ಶ್ರೀ ಸೂರ್ಯೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಮಂಜುನಾಥ್ ಶೆಟ್ಟಿ ಬಾಕ್ರಬೈಲ್ ಧರ್ಮಚಾವಡಿ, ಬಾಕ್ರಬೈಲು ಮಲಾರು ಬ್ರಹ್ಮಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಸಂತೋಷ್ ಕುಮಾರ್ ಶೆಟ್ಟಿ ಬಾಕ್ರಬೈಲು ಧಮರ್ಮಚಾವಡಿ ಮನೆ, ಸೇವಾ ಸಮಿತಿಯ ಅಧ್ಯಕ್ಷರಾದ ಹರೀಶ್ ಶೆಟ್ಟಿ ಕರ್ಪಿಕಾರ್ ಮುಖ್ಯ ಅತಿಥಿಗಳಾಗಿದ್ದರು.
ಮಹಾಬಲ ಶೆಟ್ಟಿ ಕರ್ಪಿಕಾರ್, ಮಂಜುನಾಥ ರೈ ಕರ್ಪಿಕಾರ್, ಡೆವಲಂಪ್ ಮೆಂಟ್ ಟ್ರಸ್ಟ್ ಜೊತೆ ಕಾರ್ಯದರ್ಶಿಗಳಾದ ಚಂದ್ರಹಾಸ್ ಪೂಜಾರಿ, ಕಿಟ್ಟಣ್ಣ ಶೆಟ್ಟಿ ಕರ್ಪಿಕಾರ್, ಡೆವಲಂಪ್ ಮೆಂಟ್ ಟ್ರಸ್ಟ್ ನ ಕಾರ್ಯಾಧ್ಯಕ್ಷರಾದ ಶಂಕರ್ ಭಂಡಾರಿ ನಡಿಬೈಲು, ಕಾಂತುಮೂಲೆ ರಾಮಣ್ಣ ಶೆಟ್ಟಿ, ಡೆವಲಂಪ್ ಮೆಂಟ್ ಟ್ರಸ್ಟ್ ನ ಖಜಾಂಜಿ ಪುರಂದರ ಶೆಟ್ಟಿ ಕರ್ಪಿಕಾರ್, ಮೋಹನದಾಸ್ ವಾಲ್ತಾಜೆ, ಡೆವಲಂಪ್ ಮೆಂಟ್ ಟ್ರಸ್ಟಿಗಳಾದ ಗೋಪಾಲಕೃಷ್ಣ ಶೆಟ್ಟಿ ಸೊಡಂಕೂರು ಮತ್ತು ತ್ಯಾಂಪಣ್ಣ ಶೆಟ್ಟಿ ಸೊಡಂಕೂರು, ಪುರುಷೋತ್ತಮ ಪೂಜಾರಿ ಉಳಿಯತ್ತಡ್ಕ, ಮನೋರಂಜಿತ್ ರೈ ಬದಿಯಡ್ಕ, ಡೆವಲಂಪ್ ಮೆಂಟ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಶೈಲೇಶ್ ನಾಯ್ಗ ದೈಲ, ಪ್ರೇಮಾನಂದ ರೈ, ಡೆವಲಂಪ್ ಮೆಂಟ್ ಟ್ರಸ್ಟ್ ನ ಉಪಾಧ್ಯಕ್ಷರಾದ ಪದ್ಮನಾಭ ಶೆಟ್ಟಿ ಕರ್ಪಿಕಾರ್, ಯೋಗೀಶ್ ನಾಯ್ಕ ಕರ್ಪಿಕಾರ್, ಕೃಷ್ಣ ನಾಯ್ಕ ಸೊಡಂಕೂರು, ಶೇಖರ್ ಪೂಜಾರಿ ನಡಿಬೈಲು, ಈಶ್ವರ ಶೆಟ್ಟಿಗಾರ್ ಬಪ್ಪಾಯಿಮೂಲೆ ಉಪಸ್ಥಿತರಿದ್ದರು.
ಡೆವಲಂಪ್ ಮೆಂಟ್ ಟ್ರಸ್ಟ್ ಉಪಾಧ್ಯಕ್ಷರಾದ ವಿವೇಕಾನಂದ ರೈ ಶೀಂಟೂರು ಸ್ವಾಗತಿಸಿದರು. ಚಂದ್ರಶೇಖರ್ ಶೆಟ್ಟಿ ನಡಿಬೈಲು ವಂದಿಸಿದರು.
ಲೋಕೇಶ್ ರೈ ಕರ್ಪಿಕಾರ್ ನಿರೂಪಿಸಿದರು.




