February 2, 2026

ಮಂಗಳೂರು: ಸ್ಕೂಟಿಗೆ ಖಾಸಗಿ ಬಸ್ ಢಿಕ್ಕಿ: ಮಗು ಮೃತ್ಯು, ತಾಯಿ ಗಂಭೀರ

0
20230324_190653.jpg

ಮಂಗಳೂರು: ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಢಿಕ್ಕಿ ಹೊಡೆದು ಐದು ವರ್ಷದ ಬಾಲಕ ಮೃತಪಟ್ಟು, ಬಾಲಕನ ತಾಯಿ ಗಂಭೀರ ಗಾಯಗೊಂಡ ಘಟನೆ ಮಂಗಳೂರಿನಲ್ಲಿ ಶುಕ್ರವಾರ ನಡೆದಿದೆ.

ಹಾರ್ದಿಕ್‌ ಮೃತ ಬಾಲಕ. ಬಾಲಕನ ತಾಯಿ ಸ್ವಾತಿ ಗಂಭೀರ ಗಾಯಗೊಂಡಿದ್ದಾರೆ. ಸ್ವಾತಿ ಅವರು ತಮ್ಮ ಮಗ ಹಾರ್ದಿಕ್‌ನೊಂದಿಗೆ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ವೇಳೆ ನಗರದ ಬೆಂದೂರ್‌ವೆಲ್ ಬಳಿ ಖಾಸಗಿ ಬಸ್‌ವೊಂದು ಓವರ್‌ಟೇಕ್ ಮಾಡುವ ಭರದಲ್ಲಿ ಇನ್ನೊಂದು ಬಸ್‌ಗೆ ಢಿಕ್ಕಿಯಾಗಿದೆ. ಈ ವೇಳೆ ಬಸ್‌ ದ್ವಿಚಕ್ರ ವಾಹನಕ್ಕೆ ತಾಗಿದ್ದು, ಪರಿಣಾಮ ತಾಯಿ ಮತ್ತು ಮಗ ಕೆಳಕ್ಕೆ ಬಿದ್ದಿದ್ದಾರೆ. ಬಾಲಕ ಬಸ್‌ನ ಚಕ್ರದಡಿಗೆ ಸಿಲುಕಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಮೃತ ಬಾಲಕ ನಗರದ ಅಟೊಮೊಬೈಲ್ ಮಳಿಗೆಯೊಂದರ ಮಾಲಕರ ಪುತ್ರ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!