ವಿಟ್ಲ: ವಿವಿಧ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನರಿಗೆ 94 ಸಿ ಹಕ್ಕು ಪತ್ರ ಮತ್ತು ಅಕ್ರಮ ಸಕ್ರಮ ಸಿಟ್ಟಿಂಗ್ ಕಾರ್ಯಕ್ರಮ
ವಿಟ್ಲ: ವಿಟ್ಲ ಹೋಬಳಿಯ ವಿವಿಧ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನರಿಗೆ 94 ಸಿ ಹಕ್ಕು ಪತ್ರ ಮತ್ತು ಅಕ್ರಮ ಸಕ್ರಮ ಸಿಟ್ಟಿಂಗ್ ವಿಟ್ಲದ ಶ್ರೀನಾರಾಯಣ ಗುರು ಸಭಾಭವನದಲ್ಲಿ ನಡೆಯಿತು.
ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ
ಜನರಿಗೆ ಮಣ್ಣಿನ ಬಗ್ಗೆ ಕಾಳಜಿ ಇದೆ. ಹೆಚ್ಚಿನ ಜನರು ಕೃಷಿ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಅಕ್ರಮ ಸಕ್ರಮಕ್ಕೆ ಅರ್ಜಿ ಸಲ್ಲಿಸಲೂ ಇನ್ನೂ ಅವಕಾಶ ಇದೆ. ಜನರು ಇದರ ಸದುಪಯೋಗಪಡಿಸಿಕೊಳ್ಳಬೇಕು. ಪುತ್ತೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೆಲವು ಕಾನೂನು ತೊಡಕುಗಳಿಂದ 12 ಸಾವಿರ ಅರ್ಜಿಗಳು ಬಾಕಿ ಇದೆ. 300 ಜನರಿಗೆ ಸಾಗುವಳಿ ಚೀಟಿ, ಇನ್ನೂ ಕೆಲವರಿಗೆ ಹಕ್ಕು ಪತ್ರ ನೀಡಲಾಗಿದೆ ಎಂದರು.
ತಹಶೀಲ್ದಾರ್ ಸತೀಸ್ ಕೂಡಲಂಗಿ, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಪುರುಷೋತ್ತಮ ಮುಂಗ್ಳಿಮನೆ, ಪರಮೇಶ್ವರೀ ಉಪಸ್ಥಿತರಿದ್ದರು.
ಗ್ರಾಮ ಕರಣಿಕ ಅನಿಲ್ ಸ್ವಾಗತಿಸಿದರು.ಉಪತಹಶೀಲ್ದಾರ್ ವಿಜಯವಿಕ್ರಮ್ ಕಂದಾಯ ನಿರೀಕ್ಷಕ ಪ್ರಶಾಂತ್, ಚಂದ್ರಕಲಾ ಪೆರ್ನೆ, ಕೃತಿಕಾ ಪುಣಚ, ವಿನುತಾ ಕೇಪು, ವಿವಿಧ ಜವಾಬ್ದಾರಿ ನಿಭಾಯಿಸಿದರು.
ಇದೇ ಸಂದರ್ಭದಲ್ಲಿ 27 ಫಲಾನುಭವಿಗಳಿಗೆ 94ಸಿ ಮತ್ತು 60 ಫಲಾನುಭವಿಗಳಿಗೆ 94ಸಿಸಿ ಮತ್ತು 9 ಮಂದಿ ಕೃಷಿಕರಿಗೆ ಸಾಗುವಳಿ ಚೀಟಿ ವಿತರಣೆ ಮಾಡಲಾಯಿತು. ಬಳಿಕ ಅಕ್ರಮ ಸಕ್ರಮ ಸಮಿತಿಯ ಬೈಠಕ್ ನಡೆಯಿತು.




