May 10, 2026

ಕಾಸರಗೋಡು: ಮನೆಯ ಬಾಗಿಲು ಮುರಿದು 50 ಪವನ್ ಚಿನ್ನಾಭರಣ ಕದ್ದು ಪರಾರಿ

0
IMG-20230306-WA0033.jpg

ಕಾಸರಗೋಡು: ಮನೆಗೆ ನುಗ್ಗಿದ ಕಳ್ಳರು 50 ಪವನ್ ಚಿನ್ನಾಭರಣ ಕಳವುಗೈದ ಘಟನೆ ಬದಿಯಡ್ಕ ಸಮೀಪದ ಪಳ್ಳತ್ತಡ್ಕದಲ್ಲಿ ನಡೆದಿದೆ

ಪಳ್ಳತ್ತಡ್ಕದಲ್ಲಿ ಅಬ್ದುಲ್ ರಜಾಕ್ ರವರ ಮನೆಗೆ ನುಗ್ಗಿ ಕೃತ್ಯ ನಡೆಸಲಾಗಿದ್ದು, ಎರಡಂತಸ್ತಿನ ಮನೆಯ ಕೆಳ ಅಂತಸ್ತಿನ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಕಪಾಟಿನಲ್ಲಿದ್ದ ಚಿನ್ನಾಭರಣವನ್ನು ಕಳವು ಮಾಡಲಾಗಿದೆ.

ಅಬ್ದುಲ್ ರಜಾಕ್ ಮತ್ತು ಕುಟುಂಬಸ್ಥರು ಮನೆಗೆ ಬೀಗ ಹಾಕಿ ಎದುರ್ತೋಡುನಲ್ಲಿರುವ ಪುತ್ರಿ ಮನೆಗೆ ತೆರಳಿದ್ದರು. ಸೋಮವಾರ ಬೆಳಿಗ್ಗೆ ಮನೆಗೆ ಬಂದಾಗ ಮುಂಭಾಗದ ಬಾಗಿಲು ಮುರಿದ ಸ್ಥಿತಿಯಲ್ಲಿ ಕಂಡು ಬಂದಿದ್ದು, ಒಳಗಡೆ ಪರಿಶೀಲಿಸಿ ದಾಗ ಕಪಾಟಿ ನಲ್ಲಿರಿಸಿದ್ದ ಚಿನ್ನಾಭರಣ ನಾಪತ್ತೆ ಯಾಗಿರುವುದು ಕಂಡು ಬಂದಿದೆ.

ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಡಿ ವೈ ಎಸ್ಪಿ ಪಿ. ಕೆ ಸುಧಾಕರನ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆಗೆ ನೇತೃತ್ವ ನೀಡಿದ್ದಾರೆ. ಬೆರಳಚ್ಚು ತಜ್ಞರು, ಶ್ವಾನ ದಳ ಮಾಹಿತಿ ತನ್ನು ಕಲೆ ಹಾಕಿದ್ದಾರೆ.

Leave a Reply

Your email address will not be published. Required fields are marked *

error: Content is protected !!