May 17, 2026

ಸರ್ಕಾರಿ ಕೆಲಸವನ್ನು ಉಳಿಸಿಕೊಳ್ಳಲು 5 ತಿಂಗಳ ಮಗುವನ್ನೇ ಕಾಲುವೆ‌ಗೆ ಎಸೆದ ದಂಪತಿ

0
image_editor_output_image1301310170-1674715808143.jpg

ಜೈಪುರ: ಸರ್ಕಾರಿ ಕೆಲಸವನ್ನು ಉಳಿಸಿಕೊಳ್ಳಲು ತಮ್ಮ ಪುಟ್ಟ ಕಂದಮ್ಮನನ್ನು ದಂಪತಿ ಕಾಲುವೆ‌ ಗೆ ಎಸೆದ ಪ್ರಕರಣವೊಂದು ನಡೆದಿರುವ ಬಗ್ಗೆ ರಾಜಸ್ಥಾನ ದಲ್ಲಿ ಬೆಳಕಿಗೆ ಬಂದಿದೆ.

5 ತಿಂಗಳ ಹೆಣ್ಣು ಮಗು (Girl Baby) ವನ್ನು ಕಾಲುವೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.

ಮಗು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದೆ. ಕಾಲುವೆಗೆ ಎಸೆದ ಪಾಪಿ ತಂದೆಯನ್ನು ಜವಾಹರ್ ಲಾಲ್ ಎಂದು ಗುರುತಿಸಲಾಗಿದೆ. ಈತ ಚಂದಾಸರ್ ಗ್ರಾಮದಲ್ಲಿ ಶಾಲಾ ಸಹಾಯಕರಾಗಿ ಕೆಲಸ ಮಾಡುತ್ತಿದ್ದನು.

ಕಳೆದ ವರ್ಷ ಡಿಸೆಂಬರ್ ನಲ್ಲಿ ತಾನು ನೀಡಿದ ದಾಖಲೆಯಲ್ಲಿ ಝನ್ವರ್‍ಲಾಲ್ ತಾನು ಇಬ್ಬರು ಮಕ್ಕಳನ್ನು ಹೊಂದಿರುವುದಾಗಿ ತಿಳಿಸಿದ್ದನು. ಆದರೆ ಇತ್ತೀಚೆಗೆ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರೆ, ಆ ವ್ಯಕ್ತಿ ಕೆಲಸ ಕಳೆದುಕೊಳ್ಳುವ ಆತಂಕ ಆತನಿಗೆ ಎದುರಾಗಿತ್ತು.

Leave a Reply

Your email address will not be published. Required fields are marked *

error: Content is protected !!