February 4, 2026

2023ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಕಟ: ಕರ್ನಾಟಕದ‌ ಇಬ್ಬರಿಗೆ ಪದ್ಮಶ್ರೀ ಗೌರವ

0
bharat-ratna-padma-bhushan-award.png

ನವದೆಹಲಿ: ಕೇಂದ್ರ ಸರ್ಕಾರವು 2023ನೇ ಸಾಲಿನ ಪದ್ಮ ಪ್ರಶಸ್ತಿ ಘೋಷಣೆ ಮಾಡಿದ್ದು, ಕರ್ನಾಟಕದ ಉಮ್ಮತ್ತಾಟ್‌ ಜಾನಪದ ನೃತ್ಯಗಾರ್ತಿ ರಾಣಿ ಮಾಚಯ್ಯ, ಚಿಕ್ಕಬಳ್ಳಾಪುರದ ತಮಟೆ ವಾದಕ ಮುನಿ ವೆಂಕಟಪ್ಪ ಸೇರಿ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಪ್ರಸಕ್ತ ಸಾಲಿನಲ್ಲಿ 25 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ. ಕೊಡವ ಸಂಸ್ಕೃತಿ ಹಾಗೂ ನೃತ್ಯವನ್ನು ಪಸರಿಸುವಲ್ಲಿ ರಾಣಿ ಮಾಚಯ್ಯ ಅವರ ಪಾತ್ರ ಮಹತ್ತರವಾಗಿದೆ. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಉಪಾಧ್ಯಕ್ಷೆಯಾಗಿರುವ ಇವರು ಕಲೆಗೆ ನೀಡಿದ ಕೊಡುಗೆ ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯವರಾದ ಮುನಿ ವೆಂಕಟಪ್ಪ ಅವರು ತಮಟೆ ನುಡಿಸುವ ಮೂಲಕ ಜಾನಪದ ಕಲೆಗೆ ನೀಡಿದ ಕೊಡುಗೆ ಪರಿಗಣಿಸಿ ಪ್ರಶಸ್ತಿ ಘೋಷಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!