February 4, 2026

ಬೆಳ್ಮಣ್‌: ಕಾರಿಗೆ ಪೆಟ್ರೋಲ್ ಸುರಿದು ವ್ಯಕ್ತಿ ಆತ್ಮಹತ್ಯೆ

0
IMG-20230126-WA0044.jpg

ಬೆಳ್ಮಣ್‌: ಕಾರಿಗೆ ಪೆಟ್ರೋಲ್ ಸುರಿದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕಿನ ಸಚ್ಚೇರಿಪೇಟೆಯಲ್ಲಿ ಜ. 25 ರ ಬುಧವಾರ ತಡರಾತ್ರಿ ನಡೆದಿದೆ.

ಸಚ್ಚೇರಿಪೇಟೆಯ ಕೃಷ್ಣ ಸಪಳಿಗ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಕೃಷ್ಣ ಸಪಳಿಗ ಎಂಬಾತ ತನ್ನ ತಮ್ಮ ಶೇಖರ ಸಪಳಿಗ ಎಂಬವರ ಮನೆಗೆ ತಡರಾತ್ರಿ 3 ಗಂಟೆಗೆ ಬೆಂಕಿಯಿಟ್ಟು ತಾನು ತನ್ನ ಓಮಿನಿಯಲ್ಲಿ ಕುಳಿತು ಅದಕ್ಕೂ ಬೆಂಕಿ ಹಾಕಿ ತಾನೂ ಸುಟ್ಟು ಭಸ್ಮವಾಗಿದ್ದಾನೆ.

ಶೇಖರನ ಮನೆಯಲ್ಲಿ ಕೃಷ್ಣ ಹಾಗೂ ಶೇಖರನ ಮಗಳ ಮೆಹಂದಿ ಕಾರ್ಯಕ್ರಮ ನಡೆಯುತ್ತಿದ್ದು ಮೂರು ಗಂಟೆಗೆ ಕೃಷ್ಣ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದ್ದು, ಜಮೀನು ವಿವಾದ ಈ ಘಟನೆಗೆ ಕಾರಣ ಎನ್ನಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!