October 9, 2026

ಉಡುಪಿ: ಬೀಡಿನಗುಡ್ಡೆಯ ಯುವತಿ ನಾಪತ್ತೆ

0
image_editor_output_image306432208-1791483856244

ಉಡುಪಿ: ಉಡುಪಿಯ ಬೀಡಿನಗುಡ್ಡೆ ಹುಲ್ಲಿಕೇರಿ ಪರಿಸರದಲ್ಲಿ ವಾಸವಾಗಿದ್ದ ಐಶ್ವರ್ಯ (18) ಎಂಬ ಯುವತಿ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದ್ದು, ಯುವತಿಯ ಸುಳಿವು ಸಿಕ್ಕಲ್ಲಿ ತಕ್ಷಣ ಮಾಹಿತಿ ನೀಡುವಂತೆ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ಮನವಿ ಮಾಡಿದೆ. ಮನೆಗೆಲಸ ಮಾಡಿಕೊಂಡಿದ್ದ ಐಶ್ವರ್ಯ ಅವರು ಸೆಪ್ಟೆಂಬರ್ 28 ರಂದು ಮನೆಯಿಂದ ಹೊರಗೆ ಹೋದವರು ಇದುವರೆಗೂ ವಾಪಸ್ ಬಾರದೇ ನಾಪತ್ತೆಯಾಗಿದ್ದಾರೆ.

ನಾಪತ್ತೆಯಾದ ಯುವತಿಯ ಚಹರೆ ವಿವರ: ಎತ್ತರ: 4 ಅಡಿ 10 ಇಂಚು, ಮೈಬಣ್ಣ: ಎಣ್ಣೆಕಪ್ಪು, ಶರೀರ: ಸಾಧಾರಣ, ಭಾಷೆ: ಕನ್ನಡ ಮಾತನಾಡುತ್ತಾರೆ.
ಪೊಲೀಸ್ ಸಂಪರ್ಕ ಸಂಖ್ಯೆಗಳು: ಸದರಿ ಯುವತಿಯ ಬಗ್ಗೆ ಯಾವುದೇ ಮಾಹಿತಿ ಅಥವಾ ಸುಳಿವು ದೊರೆತಲ್ಲಿ ಸಾರ್ವಜನಿಕರು ತಕ್ಷಣವೇ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ:
ಉಡುಪಿ ನಗರ ಪೊಲೀಸ್ ಠಾಣೆ: 0820-2520444, ಉಡುಪಿ ಪೊಲೀಸ್ ಕಂಟ್ರೋಲ್ ರೂಂ: 0820-2526444, ಪೊಲೀಸ್ ಇನ್‌ಸ್ಪೆಕ್ಟರ್: 9480805408
ಪೊಲೀಸ್ ಸಬ್-ಇನ್‌ಸ್ಪೆಕ್ಟರ್ (PSI): 9080805445

 

Leave a Reply

Your email address will not be published. Required fields are marked *

error: Content is protected !!