November 28, 2026

ಶಿವಮೊಗ್ಗ: ಹಿಟ್ & ರನ್‌ಗೆ ಲೈನ್‌ಮ್ಯಾನ್‌ ಮೃತ್ಯು

416f0a3a-a50b-4990-89f0-a6b6e53e6432

ಶಿವಮೊಗ್ಗ: ಆಯನೂರು ಬಳಿ ಹಿಟ್ & ರನ್‌ಗೆ ಮೆಸ್ಕಾಂ ಲೈನ್‌ಮ್ಯಾನ್‌ ಬಲಿಯಾಗಿದ್ದಾರೆ.

ಹಾರನಹಳ್ಳಿ ಮೆಸ್ಕಾಂ ಶಾಖೆಯ ತಿರುಮಲೇಶ್ ರೆಡ್ಡಿ (30) ಮೃತ ದುರ್ದೈವಿ. ಇವರು ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ ಮೂಲದವರಾಗಿದ್ದಾರೆ. ಕರ್ತವ್ಯ ಮುಗಿಸಿ ಬೈಕ್‌ನಲ್ಲಿ ವಾಪಸ್‌ ಆಗುವಾಗ ಈ ಅಪಘಾತ ನಡೆದಿದ್ದು, ಸ್ಥಳದಲ್ಲೇ ಅವರು ಸಾವನ್ನಪ್ಪಿದ್ದಾರೆ.

ಮೈಸವಳ್ಳಿ- ವೀರಣ್ಣನಬೆನವಳ್ಳಿಯಲ್ಲಿ ವಿದ್ಯುತ್ ದುರಸ್ತಿಗೆ ಅವರು ತೆರಳಿದ್ದರು. ಅಲ್ಲಿಂದ ವಾಪಸ್‌ ಆಗುವಾಗ ಅಪರಿಚಿತ ವಾಹನ ಡಿಕ್ಕಿಯಾಗಿದೆ. ವಾಹನ ಚಾಲಕ ನಿಲ್ಲಿಸದೆ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

error: Content is protected !!