November 28, 2026

ಪುತ್ತೂರು: ರೋಟರಿ ಕ್ಲಬ್‌ನ ಸಹಾಯಕ ಗವರ್ನರ್ ಆಗಿ ಜಯಂತ್ ನಡುಬೈಲು ಆಯ್ಕೆ

0
image_editor_output_image-696350894-1795855354410

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಈಸ್ಟ್‌ನ ಸದಸ್ಯರಾಗಿರುವ ಹಾಗೂ ಸಂಪ್ಯ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ರೊಟೇರಿಯನ್ ಜಯಂತ್ ನಡುಬೈಲು ಅವರು ರೋಟರಿ ಇಂಟರ್‌ನ್ಯಾಷನಲ್ ಜಿಲ್ಲೆ 3181ರ ವಲಯ 5ರ ಸಹಾಯಕ ಗವರ್ನರ್ (Assistant Governor) ಆಗಿ 2027-28ನೇ ಸಾಲಿಗೆ ಆಯ್ಕೆಯಾಗಿದ್ದಾರೆ.

ರೋಟರಿ ಕ್ಲಬ್ ಪುತ್ತೂರು ಈಸ್ಟ್‌ನಿಂದ ಈ ಜವಾಬ್ದಾರಿಗೆ ಆಯ್ಕೆಯಾಗಿರುವ ಜಯಂತ್ ನಡುಬೈಲು ಅವರು ಮುಂಬರುವ 2027-28ನೇ ಸಾಲಿನಲ್ಲಿ ವಲಯ 5ರ ಸಹಾಯಕ ಗವರ್ನರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಆಯ್ಕೆಯ ಮೂಲಕ ರೋಟರಿ ಸಂಘಟನೆಯಲ್ಲಿ ಮತ್ತೊಂದು ಪ್ರಮುಖ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!