February 4, 2026

ಬೆಳ್ತಂಗಡಿ: ಬೈಕ್ ಸ್ಕಿಡ್ ರಸ್ತೆಗೆಸೆಯಲ್ಪಟ್ಟ ಸವಾರನ ಮೇಲೆ ಚಲಿಸಿದ ಟ್ರ್ಯಾಕ್ಟರ್: ಸವಾರ ಸ್ಥಳದಲ್ಲೇ ಸಾವು, ಸಹಸವಾರ ಗಂಭೀರ

0
20230125_203636.jpg

ಬೆಳ್ತಂಗಡಿ: ಮೂಡಿಗೆರೆಯ ಆಲ್ಲೂರು ಸಮೀಪ ವಸ್ತಾರೆ ಎಂಬಲ್ಲಿ ಬೈಕ್ ಸ್ಕಿಡ್ ಆಗಿ ಮಗುಚಿ ಬಿದ್ದ ವೇಳೆ ಟ್ರ್ಯಾಕ್ಟರ್‌ ಅವರ ಮೇಲೆ ಹರಿದು ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿದ್ದಾರೆ.

ಮೃತಪಟ್ಟವರನ್ನು ಚಾರ್ಮಾಡಿ ಬೀಟಿಗೆ ನಿವಾಸಿ ಸುಲೈಮಾನ್ (35) ಎಂದು ಗುರುತಿಸಲಾಗಿದೆ.

ಘಟನೆಯಲ್ಲಿ ಬೈಕ್ ಸಹಸವಾರ ಅಶ್ರಫ್ ಅವರಿಗೆ ಗಂಭೀರ ಗಾಯಗಳಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಘಟನೆಯಲ್ಲಿ ಮೃತಪಟ್ಟಿರುವ ಸುಲೈಮಾನ್ ಅವರು ಬೀಟಿಗೆಯ ಮೂಸಕುಂಞ ಮತ್ತು ಬೀಫಾತಿಮಾ ದಂಪತಿಯ ಪುತ್ರರಾಗಿದ್ದಾರೆ. ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದರು. ಚಿಕ್ಕಮಗಳೂರಿನ ಸಹೋದರಿಯ ಮನೆಗೆ ಕೆಲಸದ ನಿಮಿತ್ತ ಪ್ರಯಾಣಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

Leave a Reply

Your email address will not be published. Required fields are marked *

error: Content is protected !!